ರ‍್ಯಾಂಕ್‌ ವಿದ್ಯಾರ್ಥಿ ಈಗ ಸನ್ಯಾಸಿ!

7

ರ‍್ಯಾಂಕ್‌ ವಿದ್ಯಾರ್ಥಿ ಈಗ ಸನ್ಯಾಸಿ!

Published:
Updated:
ರ‍್ಯಾಂಕ್‌ ವಿದ್ಯಾರ್ಥಿ ಈಗ ಸನ್ಯಾಸಿ!

ಅಹಮದಾಬಾದ್‌: ಈತ 12ನೇ ತರಗತಿಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿ.  ಪರೀಕ್ಷೆಯಲ್ಲಿ ಗಳಿಸಿದ್ದು ಶೇಕಡ 99.9 ಅಂಕಗಳು. ಆದರೆ, ಈಗ ಎಲ್ಲ ವ್ಯಾಮೋಹಗಳನ್ನು ತೊರೆದು, ದೀಕ್ಷೆ ಪಡೆಯುವ ಮೂಲಕ ಜೈನ ಸನ್ಯಾಸಿಯಾಗಲು ಮುಂದಾಗಿದ್ದಾನೆ.

ಅಹಮದಾಬಾದ್‌ನ ವರ್ಷಿಲ್‌ ಷಾ ಈ ನಿರ್ಧಾರ ಕೈಗೊಂಡಿದ್ದು, ಸನ್ಯಾಸಿಗಳ ಮಾರ್ಗ ತುಳಿಯಲು ನಿರ್ಧರಿಸಿದ್ದಾರೆ.

ವರ್ಷಿಲ್‌ ಅವರ ತಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿ. ಮಗನ ನಿರ್ಧಾರಕ್ಕೆ ತಂದೆ–ತಾಯಿ ಸಹ ಬೆಂಬಲ ನೀಡಿದ್ದಾರೆ.ಎರಡು ವಾರಗಳ ಹಿಂದೆಯಷ್ಟೇ ಗುಜರಾತ್‌ ಪ್ರೌಢ ಶಿಕ್ಷಣ ಮಂಡಳಿ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿತ್ತು. 17 ವರ್ಷದ ವರ್ಷಿಲ್‌ ಸಂತೋಷಕ್ಕೆ ಪಾರವೇ ಇರಲಿಲ್ಲ. ವರ್ಷಿಲ್‌ ಪ್ರಥಮ ಸ್ಥಾನ ಪಡೆದಿದ್ದರು.

ಆದರೆ, ಈಗ ವರ್ಷಿಲ್ ಅವರು ಕೈಗೊಂಡಿರುವ ನಿರ್ಧಾರಕ್ಕೆ ಪೋಷಕರಿಗೆ ಅಚ್ಚರಿಯಾಗಿಲ್ಲ. ಬದಲಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry