‘ನನ್ನನ್ನು ಇಲ್ಲಿಯೇ ನೋಡುತ್ತೀರಿ’

7

‘ನನ್ನನ್ನು ಇಲ್ಲಿಯೇ ನೋಡುತ್ತೀರಿ’

Published:
Updated:
‘ನನ್ನನ್ನು ಇಲ್ಲಿಯೇ ನೋಡುತ್ತೀರಿ’

ಬೆಂಗಳೂರು: ‘ನನ್ನನ್ನು ಮತ್ತೆ ಇಲ್ಲಿಯೇ ನೋಡುವ ಅವಕಾಶ ಮುಂದೆ ಬರುತ್ತೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ವಿರೋಧ ಪಕ್ಷದ ಸದಸ್ಯರಿಗೆ ಹೇಳಿದರು.

ಮಧ್ಯಾಹ್ನ ಭೋಜನ ವಿರಾಮದ ಬಳಿಕ ವಿಧಾನಸಭೆ  ಕಲಾಪ ಆರಂಭವಾದಾಗ ಸಚಿವರಿಗೆ ಮೀಸಲಾಗಿರುವ ಆಸನಗಳ ಮೊದಲ ಸಾಲಿನಲ್ಲಿ ಯಾವ ಸಚಿವರೂ ಇರಲಿಲ್ಲ. ಇದನ್ನು ಕಂಡ ಬಿಜೆಪಿಯ ಸಿ.ಟಿ. ರವಿ, ‘ಯಾವ ಸಚಿವರೂ ಇಲ್ಲ, ಗ್ಯಾಲರಿಯಲ್ಲಿ ಅಧಿಕಾರಿಗಳು ಇಲ್ಲ. ಯಾರನ್ನು ಉದ್ದೇಶಿಸಿ ಮಾತನಾಡಲಿ’ ಎಂದು ಪ್ರಶ್ನಿಸಿದರು. ‘ನಾವೆಲ್ಲ ಇದ್ದೇವಲ್ಲ’ ಎಂದು ಪರಮೇಶ್ವರ್‌ ಪ್ರತಿಕ್ರಿಯಿಸಿದರು.

‘ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ನೀವು ವಿಧಾನಸಭೆ ಕಡೆ ಮುಖ ಹಾಕುತ್ತಿಲ್ಲ’ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಕೆಣಕಿದರು. ‘ಪ್ರಶ್ನೋತ್ತರ ವೇಳೆಯಲ್ಲಿ ಬಂದಿದ್ದೆ. ನೀವು ಇರಲಿಲ್ಲ’ ಎಂದು ಪರಮೇಶ್ವರ್‌ ಉತ್ತರಿಸಿದರು. 

‘ನಿಮ್ಮನ್ನು ಇಲ್ಲಿಯೇ ನೋಡಬೇಕು ಎಂಬುದು ನಮ್ಮ ಭಾವನೆ’ ಎಂದು ಬಿಜೆಪಿಯ ವಿ. ಸುನೀಲ್‌ಕುಮಾರ್‌ ಕುಟುಕಿದರು. ‘ನನ್ನನ್ನು ಇಲ್ಲಿಯೇ ನೋಡುವ ಅವಕಾಶ ಮುಂದೆ ಬರಲಿದೆ. ಅಲ್ಲಿಯವರೆಗೆ ಕಾಯಿರಿ’ ಎಂದು ಸಚಿವ ಪರಮೇಶ್ವರ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry