ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಂತ್‌ ಕುಮಾರ್‌ ಪಾಂಚಾಲ್‌ ನಿಧನ

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರೈತ ಮುಖಂಡ, ಹೋರಾಟಗಾರ ಹೇಮಂತ್‌ ಕುಮಾರ್‌ ಪಾಂಚಾಲ್‌ (58) ಅವರು ಧಾರವಾಡದಲ್ಲಿ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಇವರು ಅವಿವಾಹಿತರಾಗಿದ್ದರು.

ಎಂಬತ್ತರ ದಶಕದ ರೈತ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದರು. ಇವರು ಐಐಟಿ ಶಿಕ್ಷಣವನ್ನು ತ್ಯಜಿಸಿ ಹೋರಾಟಕ್ಕಿಳಿದಿದ್ದರು. ಇವರ ಹುಟ್ಟೂರು ನವಲಗುಂದದಲ್ಲಿಯೇ ಇವರದೇ ನೇತೃತ್ವದಲ್ಲಿ ಚಳವಳಿ ಉಗ್ರಸ್ವರೂಪ ಪಡೆದಾಗ ಗೋಲಿಬಾರ್‌ ನಡೆದು ರೈತರು ಸತ್ತಿದ್ದರು. ಆಗ ರಾಜ್ಯದಾದ್ಯಂತ ಪ್ರತಿಭಟನೆ ನಡೆದಿತ್ತು. ಅದೇ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು.

ಹೋದ ಲೋಕಸಭಾ ಚುನಾವಣೆಯಲ್ಲಿ ಇವರು ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದರು. ಈಚೆಗೆ ಇವರು ಅಖಿಲ ಭಾರತ ಮಟ್ಟದಲ್ಲಿ ರೈತಸಂಘಗಳ ಮಹಾ ಒಕ್ಕೂಟವನ್ನು ಕಟ್ಟಿ ಅದರ ಸಂಚಾಲಕರಾಗಿದ್ದರು.

ಶುಕ್ರವಾರ ಇವರ ಪಾರ್ಥಿವ ಶರೀರವನ್ನು ಧಾರವಾಡದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ನಂತರ ಮೃತದೇಹವನ್ನು ಸಿ.ಬಿ.ಗುತ್ತಲ ಆಯುರ್ವೇದ ಕಾಲೇಜಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT