ಕಣ್ವ ಬಡಾವಣೆಯಲ್ಲಿ ‘ಕದಂಬ ವನ’

7
ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ ಅತ್ಯುತ್ತಮ ಕಾರ್ಯ– ಮೆಚ್ಚುಗೆ

ಕಣ್ವ ಬಡಾವಣೆಯಲ್ಲಿ ‘ಕದಂಬ ವನ’

Published:
Updated:
ಕಣ್ವ ಬಡಾವಣೆಯಲ್ಲಿ ‘ಕದಂಬ ವನ’

ಚನ್ನಪಟ್ಟಣ: ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮಾಡಲಾಗದ ಕೆಲಸವನ್ನು ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ ಮಾಡಿದ್ದಾರೆ ಎಂದು ತಹಶೀಲ್ದಾರ್ ರಮೇಶ್ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಕಣ್ವ ಬಡಾವಣೆಯಲ್ಲಿ ಪುಟ್ಟಸ್ವಾಮಿ ಅವರು ಹೊಸದಾಗಿ ನಿರ್ಮಾಣ ಮಾಡಿರುವ ‘ಕದಂಬ ವನ’ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವರು ತಮ್ಮ ಪ್ರಚಾರಕ್ಕಾಗಿ ತಮ್ಮ ಲಾಭಕ್ಕಾಗಿ ಗಿಡ ನೆಡುವವರಂತೆ ನಾಟಕ ಆಡುವುದನ್ನು ನೋಡುತ್ತಿದ್ದೇವೆ. ಆದರೆ ಪುಟ್ಟಸ್ವಾಮಿ ಅವರು ಯಾವುದೇ ಪ್ರಚಾರ, ಪ್ರಶಸ್ತಿ ಬಯಸದೆ ತಮ್ಮ ಪ್ರಾಧ್ಯಾಪಕ ವೃತ್ತಿಯ ಸಂಬಳ, ನಿವೃತ್ತಿ ವೇತನದ ಹಣವನ್ನು ಖರ್ಚು ಮಾಡಿ ವನಗಳನ್ನು  ನಿರ್ಮಾಣ ಮಾಡುತ್ತಿದ್ದಾರೆ ಎಂದರು.

ವನಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ. ನೀರಿಲ್ಲದ ಕಾಲದಲ್ಲಿ ಆ ಗಿಡಗಳಿಗೆಲ್ಲಾ ನೀರು ಹಾಕುವುದು, ಗಿಡಗಳನ್ನು ಕಾಪಾಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇಂತವರಿಗೆ ಸಮಾಜದ ಪ್ರತಿಯೊಬ್ಬರು ಸಹಕಾರ, ಪ್ರೋತ್ಸಾಹ ನೀಡಬೇಕು. ಇವರಿಂದ ಮತ್ತಷ್ಟು ವನಗಳು ನಿರ್ಮಾಣವಾಗಲಿ, ಪರಿಸರ ಉಳಿಯುವಂತಾಗಲಿ ಎಂದು ಆಶಿಸಿದರು.

ಕದಂಬ ವನ ನಿರ್ಮಾಣಗಾರ ಭೂಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ‘ಎಲ್ಲರೂ ವಿನಾಶಕಾರಿ ಶಕ್ತಿಗಳಾಗಿ ಭೂಮಿಯನ್ನು, ಪರಿಸರರವನ್ನು ದುಡ್ಡು ಗಳಿಸುವ ಮಾರುಕಟ್ಟೆಯ ಸರಕನ್ನಾಗಿ ನೋಡುತ್ತಾ ಪ್ರಕೃತಿ ಮಾತೆಗೆ ದ್ರೋಹ ಬಗೆಯುತ್ತಿದ್ದಾರೆ. ಆದರೆ ನನ್ನ ಪಾಲಿಗೆ ಈ ಭೂಮಿಯೇ ನಿಜವಾದ ಸ್ವರ್ಗ. ಪ್ರಕೃತಿಯನ್ನು ಕಾಪಾಡಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದರು.

ಹಸಿರು ಪಡೆಯ ವಿದ್ಯಾರ್ಥಿಗಳಾದ ತಗಚಗೆರೆಯ ಸಾಗರ್, ಶಿವಕುಮಾರ್, ಸುಣ್ಣಘಟ್ಟ ದರ್ಶನ್, ಗಗನ್, ಯಾದವ್, ಕಿರಣ್, ಸೌಜನ್ಯ, ರಶ್ಮಿ, ಜಯಶೀಲ, ಕೇಶವ ರಾಮ, ಲಕ್ಷ್ಮಣ ಮುಂತಾದವರು ಹಾಜರಿದ್ದು, ವನದಲ್ಲಿ ಗಿಡಗಳನ್ನು ನೆಟ್ಟು ನೀರು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry