ಐ.ಟಿ ಉದ್ಯೋಗ ಕಡಿತ ವರದಿ ನಿರಾಧಾರ: ರವಿಶಂಕರ್ ಹೇಳಿಕೆ

7

ಐ.ಟಿ ಉದ್ಯೋಗ ಕಡಿತ ವರದಿ ನಿರಾಧಾರ: ರವಿಶಂಕರ್ ಹೇಳಿಕೆ

Published:
Updated:
ಐ.ಟಿ ಉದ್ಯೋಗ ಕಡಿತ ವರದಿ ನಿರಾಧಾರ: ರವಿಶಂಕರ್ ಹೇಳಿಕೆ

ಕೊಚ್ಚಿ: ‘ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ಯಮದಲ್ಲಿ ಉದ್ಯೋಗ ಕಡಿತ ವರದಿಗಳು ಸಂಪೂರ್ಣ ಸುಳ್ಳು’ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

‘ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಮತ್ತು ಇನ್ಫೊಸಿಸ್‌ನಂತಹ ಪ್ರಮುಖ ಐ.ಟಿ ಕಂಪೆನಿಗಳು ಪ್ರಸಕ್ತ ವರ್ಷ ತಲಾ 20,000 ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿವೆ. ಇದರಿಂದಾಗಿ ಸಾಕಷ್ಟು ಐ.ಟಿ ಉದ್ಯೋಗ ಸೃಷ್ಟಿಯಾಗಲಿವೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಟಿಸಿಎಸ್‌ ಮತ್ತು ಇನ್ಫೊಸಿಸ್‌ ಸೇರಿದಂತೆ ಅಗ್ರಮಾನ್ಯ ಕಂಪೆನಿಗಳು ಕೂಡ ಮಾಧ್ಯಮಗಳ ಉದ್ಯೋಗ ಕಡಿತ ವರದಿಗಳನ್ನುನಿರಾಕರಿಸಿವೆ. ಹೀಗಾಗಿ ವಿನಾ ಕಾರಣ ಆತಂಕ ಪಡುವ ಅಗತ್ಯ ಇಲ್ಲ ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry