ಚಿನ್ನದ ಬಾಂಡ್‌

7

ಚಿನ್ನದ ಬಾಂಡ್‌

Published:
Updated:
ಚಿನ್ನದ ಬಾಂಡ್‌

ಮುಂಬೈ: ಚಿನ್ನದ ಬಾಂಡ್‌ ಯೋಜನೆಯ (ಎಸ್‌ಜಿಬಿ) ಎಂಟು ಕಂತುಗಳಲ್ಲಿ ಒಟ್ಟು ₹5,400 ಕೋಟಿ ಮೌಲ್ಯದ ಬಾಂಡ್‌ ವಿತರಣೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮಾಹಿತಿ ನೀಡಿದೆ.

2015ರ ನವೆಂಬರ್‌ನಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಮೊದಲ ವರ್ಷದಲ್ಲಿ ₹15 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆಯನ್ನು ಆರ್‌ಬಿಐ ಹೊಂದಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಆರ್ಥಿಕ ವರ್ಷದಲ್ಲಿ ಒಬ್ಬ ವ್ಯಕ್ತಿ 1 ಗ್ರಾಂನಿಂದ ಗರಿಷ್ಠ 500 ಗ್ರಾಂವರೆಗೆ ಹೂಡಿಕೆ ಮಾಡಬಹುದಾಗಿದೆ.

ಬಂಡವಾಳ ಸಂಗ್ರಹ

ನವದೆಹಲಿ:
ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಷೇರುಗಳ ಖಾಸಗಿ ವಿತರಣೆ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ₹15 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ಈ  ಉದ್ದೇಶಕ್ಕೆ ₹1 ರ ಮುಖ ಬೆಲೆಯ ಷೇರುಗಳನ್ನು ಬಿಡುಗಡೆ ಮಾಡಿದ್ದು ಪ್ರತಿ ಷೇರಿನ ಬೆಲೆ ₹288ರಷ್ಟು ನಿಗದಿ ಮಾಡಿದೆ. ಈ ಮೂಲಕ ₹11 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆ ಇಟ್ಟುಕೊಂಡಿದೆ. 2019ರ ಒಳಗೆ ಬಾಸೆಲ್‌–3 ಮಾನದಂಡ ಅಳವಡಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹ ಅನಿವಾರ್ಯಾವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry