ವಿದೇಶಿ ಬಿರುದು ಪಡೆಯುವಂತಿಲ್ಲ

7

ವಿದೇಶಿ ಬಿರುದು ಪಡೆಯುವಂತಿಲ್ಲ

Published:
Updated:
ವಿದೇಶಿ ಬಿರುದು ಪಡೆಯುವಂತಿಲ್ಲ

ಸಂವಿಧಾನದ 18ನೇ ವಿಧಿಯು ಬಿರುದಿನ ಬಗ್ಗೆ ಉಲ್ಲೇಖಿಸುತ್ತದೆ. ಸೇನಾ ಸಂಬಂಧ ಅಥವಾ ಶಿಕ್ಷಣ ಸಂಬಂಧಿತ ಪ್ರಶಸ್ತಿ ಅಥವಾ ಬಿರುದುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬಿರುದು, ಪ್ರಶಸ್ತಿಗಳನ್ನು ಭಾರತೀಯ ಪ್ರಜೆ ಪಡೆಯುವಂತಿಲ್ಲ.

ಭಾರತೀಯ ನಾಗರಿಕನಲ್ಲದ ವ್ಯಕ್ತಿ ಭಾರತದಲ್ಲಿ ಲಾಭದಾಯಕ ಹುದ್ದೆಯಲ್ಲಿ ಇರುವಾಗಲೂ ಆತ ಬೇರೆ ದೇಶಗಳ ಪ್ರಶಸ್ತಿ, ಬಿರುದುಗಳನ್ನು ಸ್ವೀಕರಿಸುವಂತಿಲ್ಲ.

ಒಂದು ವೇಳೆ ಸ್ವೀಕರಿಸಲೇಬೇಕಾದ ಪ್ರಸಂಗ ಬಂದರೆ ಆತ/ಆಕೆ ಭಾರತದ ರಾಷ್ಟ್ರಪತಿ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅದೇ ರೀತಿ ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ ರಾವ್‌ಬಹದ್ದೂರ್‌, ಸವಾಯಿ, ರಾಯ್‌ ಸಾಹಬ್‌, ಜಮೀನ್ದಾರ್‌, ತಾಲ್ಲೂಕಾದಾರ್‌ ಇತ್ಯಾದಿ ಬಿರುದುಗಳನ್ನು 18ನೇ ವಿಧಿಯ ಅನುಸಾರ ರದ್ದು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry