ಮೈಸೂರಿನಲ್ಲಿ ವಿಶ್ವ ದಾಖಲೆಗಾಗಿ ಯೋಗಾಸನ ಪೂರ್ವಾಭ್ಯಾಸ

7

ಮೈಸೂರಿನಲ್ಲಿ ವಿಶ್ವ ದಾಖಲೆಗಾಗಿ ಯೋಗಾಸನ ಪೂರ್ವಾಭ್ಯಾಸ

Published:
Updated:
ಮೈಸೂರಿನಲ್ಲಿ ವಿಶ್ವ ದಾಖಲೆಗಾಗಿ ಯೋಗಾಸನ ಪೂರ್ವಾಭ್ಯಾಸ

ಮೈಸೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗದಲ್ಲಿ ಭಾನುವಾರ ಸಾಮೂಹಿಕ ಯೋಗಾಸನದ ಪೂರ್ವಾಭ್ಯಾಸ ನಡೆಯಿತು.

ಸುಮಾರು ಎರಡೂವರೆ ಸಾವಿರ ಯೋಗ ಪಟುಗಳು ಸಾಮೂಹಿಕವಾಗಿ ಯೋಗಾಸನ ಪ್ರದರ್ಶಿಸಿದರು. ಬೆಳಿಗ್ಗೆ 6ಕ್ಕೆ ಧಾವಿಸಿ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಮ್ಯಾಟ್ ಹಾಸಿ ಸಿದ್ಧರಾದ ಸಾರ್ವಜನಿಕರು ವ್ಯಾಯಾಮ, ಯೋಗ, ಪ್ರಾಣಾಯಾಮ ಹಾಗೂ ಧ್ಯಾನವನ್ನು ಸುಮಾರು 45 ನಿಮಿಷ ಪ್ರದರ್ಶಿಸಿದರು.

60 ಸಾವಿರ ಯೋಗ ಪಟುಗಳನ್ನು ಸೇರಿಸಿ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ ಜಿಲ್ಲಾಡಳಿತ ಇದನ್ನು ಆಯೋಜಿಸಿತ್ತು. ಜೂನ್ 18 ರಂದು ಮತ್ತೊಮ್ಮೆ ಪೂರ್ವಾಭ್ಯಾಸ ನಡೆಯಲಿದೆ.

ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾಧಿಕಾರಿ ಡಿ. ರಂದೀಪ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry