ರಾಜೀವ್ ಗಾಂಧಿ ಅವರ 32 ವರ್ಷಗಳ ಹಿಂದಿನ ‘15 ಪೈಸೆ’ ಹೇಳಿಕೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌

7

ರಾಜೀವ್ ಗಾಂಧಿ ಅವರ 32 ವರ್ಷಗಳ ಹಿಂದಿನ ‘15 ಪೈಸೆ’ ಹೇಳಿಕೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌

Published:
Updated:
ರಾಜೀವ್ ಗಾಂಧಿ ಅವರ 32 ವರ್ಷಗಳ ಹಿಂದಿನ ‘15 ಪೈಸೆ’ ಹೇಳಿಕೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು 32 ವರ್ಷಗಳ ಹಿಂದೆ ನೀಡಿದ್ದ ‘15 ಪೈಸೆ’ ಹೇಳಿಕೆಯನ್ನು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ತೀರ್ಪು ನೀಡುವ ವೇಳೆ ಸುಪ್ರೀಂಕೋರ್ಟ್ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.

‘ಬಡವರ ಕಲ್ಯಾಣಕ್ಕೆಂದು ಸರ್ಕಾರ ವಿನಿಯೋಗಿಸುವ ಪ್ರತಿ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಅರ್ಹ ಫಲಾನುಭವಿಗಳಿಗೆ ದೊರೆಯುತ್ತದೆ ಎಂದು ದೇಶದ ಮಾಜಿ ಪ್ರಧಾನಿಯೊಬ್ಬರು ಹೇಳಿದ್ದರು. ಇದು ಆಧಾರ್ ವಿಚಾರದಲ್ಲಿಯೂ ಅನ್ವಯವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಈ ವಿಚಾರದಲ್ಲಿ ಜಾಗರೂಕರಾಗಿರಬೇಕು’ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ 157 ಪುಟಗಳ ತೀರ್ಪಿನಲ್ಲಿ ಹೇಳಿತ್ತು.

ಪ್ಯಾನ್‌ ಕಾರ್ಡ್‌ಗೆ ಅರ್ಜಿ  ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್‌) ಸಲ್ಲಿಸುವಾಗ ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ನ್ಯಾಯಪೀಠ ಶುಕ್ರವಾರ ಎತ್ತಿಹಿಡಿದಿತ್ತು.

1985ರಲ್ಲಿ ಒಡಿಶಾದ ಪ್ರವಾಹಪೀಡಿತ ಕಾಳಹಂಡಿ ಜಿಲ್ಲೆಗೆ ಭೇಟಿ ನೀಡಿದ್ದ ರಾಜೀವ್ ಗಾಂಧಿ ಅವರು, ಬಡವರ ಕಲ್ಯಾಣಕ್ಕೆಂದು ಸರ್ಕಾರ ವಿನಿಯೋಗಿಸುವ ಪ್ರತಿ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಅರ್ಹ ಫಲಾನುಭವಿಗಳಿಗೆ ದೊರೆಯುತ್ತದೆ ಎಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry