ಭಯ ಹುಟ್ಟಿಸುವ ‘ಚಿತ್ರಾಲಿ’

7

ಭಯ ಹುಟ್ಟಿಸುವ ‘ಚಿತ್ರಾಲಿ’

Published:
Updated:
ಭಯ ಹುಟ್ಟಿಸುವ ‘ಚಿತ್ರಾಲಿ’

‘ಬಿಗ್‌ಬಾಸ್’ ಖ್ಯಾತಿಯ ಕಿರಿಕ್ ಕೀರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಾರರ್ ಚಿತ್ರ ‘ಚಿತ್ರಾಲಿ’ಯ ಟ್ರೇಲರ್‌  ಈಚೆಗೆ ಯುಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಇದುವರೆ 63 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಮಲೆನಾಡಲ್ಲೊಂದು ಮನೆ. ಅದನ್ನು ಮಾರಲು ಬರುವ ಹೊಸ ತಲೆಮಾರಿನ ಮಂದಿಗೆ ಮನೆ ಮಾರಲು ಅಡ್ಡಿಯಾಗುವ ಆತ್ಮ, ಆತ್ಮವನ್ನು ಹುಡುಕುವ ಪ್ರಯತ್ನ; ಹೀಗೆ ಸಿನಿಮಾದ ಕತೆಯ ಎಳೆಯನ್ನು ಟ್ರೇಲರ್‌ ಬಿಟ್ಟುಕೊಡುತ್ತದೆ.

ಟ್ರೇಲರ್‌ನಲ್ಲಿ ಆಧುನಿಕ ಉಪಕರಣಗಳನ್ನು ಬಳಸಿ ಆತ್ಮದ ಹುಡುಕಾಟ ನಡೆಸುವ ದೃಶ್ಯವಿದ್ದು,  ದೆವ್ವದ ಸಿನಿಮಾಕ್ಕೆ ಹೊಸ ಆಯಾಮ ನೀಡಲು ಪ್ರಯತ್ನಿಸಿದಂತೆ ಭಾಸವಾಗುತ್ತದೆ. ಮಗುವೊಂದರ ಸುತ್ತ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದೆ ಎಂಬುದು ಟ್ರೇಲರ್ ಸೂಚ್ಯವಾಗಿ ಹೇಳುತ್ತದೆ.

ಹಿನ್ನೆಲೆ ಸಂಗೀತ, ಛಾಯಾಗ್ರಹಣ ಗಮನ ಸೆಳೆಯುತ್ತದೆ. ಟ್ರೇಲರ್‌ನಲ್ಲಿ  ಕಿರಿಕ್ ಕೀರ್ತಿ, ರಘು ಭಟ್, ಅನುಷಾ, ಬೇಬಿ ಶಾರದಾ, ಸಾಯಿಕೃಷ್ಣ, ಅವರ ನಟನೆಯ ದೃಶ್ಯಗಳಿವೆ.

ಚಿತ್ರವನ್ನು ರವಿ ಚೇತನ್ ನಿರ್ದೇಶಿಸಿದ್ದಾರೆ. ನಾಬಿನ್‌ ಪಾಲ್‌ ಸಂಗೀತ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry