ಉಷ್ಣವಲಯದಲ್ಲಿ ಹೆಚ್ಚು ಮಳೆ ಪ್ರಮಾಣ

7
ಹವಾಮಾನ ವೈಪರೀತ್ಯದ ಪರಿಣಾಮ

ಉಷ್ಣವಲಯದಲ್ಲಿ ಹೆಚ್ಚು ಮಳೆ ಪ್ರಮಾಣ

Published:
Updated:
ಉಷ್ಣವಲಯದಲ್ಲಿ ಹೆಚ್ಚು ಮಳೆ ಪ್ರಮಾಣ

ವಾಷಿಂಗ್ಟನ್‌: ಹವಾಮಾನ ವೈಪರೀತ್ಯದ ಪರಿಣಾಮ ಉಷ್ಣವಲಯಗಳಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಜತೆಗೆ ಸದಾ ಉಷ್ಣಾಂಶದಿಂದ ಕೂಡಿರುವ ವಾತಾವರಣ ಕೂಡ ತಂಪಾಗುತ್ತಿದೆ!ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಕೇಂದ್ರ ‘ನಾಸಾ’ ನಡೆಸಿದ ಅಧ್ಯಯನ ಈ ಬದಲಾವಣೆಯನ್ನು ಪತ್ತೆ ಹಚ್ಚಿದೆ. ಇತ್ತೀಚಿನ ದಶಕಗಳಲ್ಲಿ ಉಷ್ಣವಲಯಗಳ ಮೋಡಗಳಲ್ಲಿಯ ಕೆಲ ಬದಲಾವಣೆಗಳನ್ನು ಹ್ಯೂ ಸೂ ನೇತೃತ್ವದ ನಾಸಾ ವಿಜ್ಞಾನಿಗಳ ತಂಡ ಗಮನಿಸಿದೆ.ಭೂ ಮೇಲ್ಮೈ ತಾಪಮಾನ ಹೆಚ್ಚಳದಿಂದ ಉಷ್ಣವಲಯದಲ್ಲಿ ದಟ್ಟ ಮೋಡಗಳ ಸೃಷ್ಟಿಯಾಗುತ್ತಿವೆ. ಈ ಮೋಡಗಳು ಸುರಿಸುವ ಮಳೆಯಿಂದ ಉಷ್ಣವಲಯದ ಬಿಸಿಗಾಳಿಯು ತಂಗಾಳಿಯಾಗುತ್ತಿದೆ. ಒಂದೆಡೆ ನಿರಂತರವಾಗಿ ಭೂಮಿಯ  ತಾಪಮಾನದ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ  ಉಷ್ಣವಲಯಗಳಲ್ಲಿ ಮಳೆ ಪ್ರಮಾಣವೂ ಹೆಚ್ಚಾಗುತ್ತಿದೆ.

ಕಳೆದ ಮೂರ್ನಾಲ್ಕು ದಶಕಗಳ 23 ಭೂ ವಾತಾವರಣದ ಮಾದರಿಗಳನ್ನು ಈ ತಂಡ ಅಧ್ಯಯನ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬಂದಿದೆ.ಭವಿಷ್ಯದಲ್ಲಿ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನದ ಪರಿಣಾಮ ಅಂದಾಜಿಸಲು ಈ ಅಧ್ಯಯನ ನೆರವಾಗಲಿದೆ ಎಂದು ನಾಸಾ ಹೇಳಿದೆ. ಸಮುದ್ರಮಟ್ಟದಿಂದ ಅತಿ ಎತ್ತರದಲ್ಲಿರುವ ಉಷ್ಣವಲಯದ ಮೋಡಗಳು ವಾತಾವರಣದಿಂದ ಶಾಖಹೀರಿಕೊಳ್ಳುತ್ತಿವೆ. ಇಂತಹ ಮೋಡಗಳ ಸಂಖ್ಯೆ ಹೆಚ್ಚಾದಲ್ಲಿ ಭವಿಷ್ಯದಲ್ಲಿ ಉಷ್ಣವಲಯಗಳ ವಾತಾವರಣ ತಂಪಾಗಿರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry