ಸರ್ಕಾರದ ಯೋಜನೆಗೆ ಅಂಗವಿಕಲ ಮಕ್ಕಳು ರಾಯಭಾರಿಗಳು

7

ಸರ್ಕಾರದ ಯೋಜನೆಗೆ ಅಂಗವಿಕಲ ಮಕ್ಕಳು ರಾಯಭಾರಿಗಳು

Published:
Updated:
ಸರ್ಕಾರದ ಯೋಜನೆಗೆ ಅಂಗವಿಕಲ ಮಕ್ಕಳು ರಾಯಭಾರಿಗಳು

ತಿರುವನಂತಪುರ: ಬೌದ್ಧಿಕ ನ್ಯೂನತೆಯ ಹಾಗೂ ಅಂಗವಿಕಲ ಮಕ್ಕಳ ಸಬಲೀಕರಣಕ್ಕಾಗಿ ಕೇರಳ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಅನುಯಾತ್ರ’ ಕಾರ್ಯಕ್ರಮಕ್ಕೆ 23 ಮಕ್ಕಳನ್ನು ರಾಯಭಾರಿಗಳನ್ನಾಗಿ ನಿಯೋಜಿಸಲಾಗಿದೆ.ಜಾದೂಗಾರಿಕೆಯಲ್ಲಿ ವಿಶೇಷ ತರಬೇತಿ ಪಡೆದಿರುವ ಈ ಮಕ್ಕಳು, ಆಟಿಸಂ, ಮಿದುಳು ಲಕ್ವ, ಖಿನ್ನತೆಯಿಂದ ಬಳಲುತ್ತಿದ್ದಾರೆ. ಇವರಿಗೆ ಇಲ್ಲಿನ ಮ್ಯಾಜಿಕ್ ಅಕಾಡೆಮಿಯಲ್ಲಿ ಮೂರು ತಿಂಗಳ ಕಾಲ ಶ್ರೇಷ್ಠ ಜಾದೂಗಾರ ಗೋಪಿನಾಥ್ ಮುತುಕಾಡ್ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ.‘ಇಂಥ ಮಕ್ಕಳ ಸಮಗ್ರ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವುದು  ಈ ಯೋಜನೆಯ ಮುಖ್ಯ ಉದ್ದೇಶ. ರಾಜ್ಯವನ್ನು ಅಂಗವಿಕಲ ಸ್ನೇಹಿಯಾಗಿ ಪರಿವರ್ತಿಸುವುದು ಮತ್ತು  ಇಂಥ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ  ಉದ್ದೇಶ ಹೊಂದಲಾಗಿದೆ’ ಎಂದು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ರಾಜ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.ಸೋಮವಾರ  ಈ ಯೋಜನೆಗೆ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಚಾಲನೆ ನೀಡುವರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ, ನ್ಯಾಯಮೂರ್ತಿ ಪಿ.ಸದಾಶಿವಂ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry