ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮುಂದುವರಿದ ಮಳೆ

7

ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮುಂದುವರಿದ ಮಳೆ

Published:
Updated:
ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮುಂದುವರಿದ ಮಳೆ

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗಿದೆ.

ಮೂಡುಬಿದಿರೆ, ಮೂಲ್ಕಿ,  ಶಿರಾಲಿ, ಗೇರುಸೊಪ್ಪದಲ್ಲಿ ತಲಾ 15 ಸೆಂ.ಮೀ., ಹೊನ್ನಾವರದಲ್ಲಿ 14 ಸೆಂ.ಮೀ.,  ಕೋಟ ಮತ್ತು ಆಗುಂಬೆಯಲ್ಲಿ  ತಲಾ 12 ಸೆಂ.ಮೀ. ಮಳೆಯಾಗಿದೆ.

ಕಾರ್ಕಳ, ಸಿದ್ದಾಪುರದಲ್ಲಿ ತಲಾ 11 ಸೆಂ.ಮೀ., ಪಣಂಬೂರು, ಮಂಗಳೂರು, ಕಾರವಾರ, ಲಿಂಗನಮಕ್ಕಿ, ಕೊಟ್ಟಿಗೆಹಾರದಲ್ಲಿ ತಲಾ 10 ಸೆಂ.ಮೀ., ಬಂಟ್ವಾಳ, ಸುಳ್ಯ,  ಅರಸಾಲುವಿನಲ್ಲಿ ತಲಾ 9 ಸೆಂ.ಮೀ., ಉತ್ತರ ಕನ್ನಡದ ಅಂಕೋಲಾ, ಭಾಗಮಂಡಲ, ತಾಳಗುಪ್ಪದಲ್ಲಿ ತಲಾ 8 ಸೆಂ.ಮೀ., ಧರ್ಮ

ಸ್ಥಳ, ಪುತ್ತೂರಿನಲ್ಲಿ ತಲಾ 7 ಸೆಂ.ಮೀ. ಮಳೆಯಾಗಿದೆ. 

ಬನವಾಸಿ, ಮಂಚಿಕೆರೆ, ಯಲ್ಲಾಪುರ, ಖಾನಾಪುರ, ಲೊಂಡಾ, ಕಲಬುರ್ಗಿ, ಕಲ್ಗಿ, ಶೃಂಗೇರಿ, ಕಳಸ, ಕಮ್ಮರಡಿಯಲ್ಲಿ ತಲಾ 6 ಸೆಂ.ಮೀ., ಹಿರೇಕೆರೂರು, ಹುಮ್ನಾಬಾದ್‌,  ಸುಳೆಪೇಟೆ, ಸೈದಾಪುರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ.

ಕಲಘಟಗಿ,  ಇಂಡಿ, ಚಿಂಚೋಳಿ, ದೇವದುರ್ಗ,  ಕೊಣನೂರಿನಲ್ಲಿ ತಲಾ 2 ಸೆಂ.ಮೀ., ಬೆಳಗಾವಿ,  ಶಿಗ್ಗಾವಿ, ಸವಣೂರು, ರಾಣಿಬೆನ್ನೂರು, ಬದಾಮಿ, ಇಳಕಲ್‌, ಬಿದರಿನ ಔರಾದ್‌, ಸೇಡಂ, ಯಡ್ರಾಮಿ, ಹುಣಸೂರು, ಕೆ.ಆರ್‌.ಪೇಟೆ,  ಚನ್ನಗಿರಿ, ಸಂತೆಬೆನ್ನೂರು ಮತ್ತು  ಹುಲಿಯೂರುದುರ್ಗದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry