ಗಿನ್ನೆಸ್‌ ದಾಖಲೆಗಾಗಿ 18ರಂದು ಶೀರ್ಷಾಸನ ಪ್ರದರ್ಶನ

7

ಗಿನ್ನೆಸ್‌ ದಾಖಲೆಗಾಗಿ 18ರಂದು ಶೀರ್ಷಾಸನ ಪ್ರದರ್ಶನ

Published:
Updated:
ಗಿನ್ನೆಸ್‌ ದಾಖಲೆಗಾಗಿ 18ರಂದು ಶೀರ್ಷಾಸನ ಪ್ರದರ್ಶನ

ಬೆಂಗಳೂರು: ಯೋಗ ಗಂಗೋತ್ರಿ ಟ್ರಸ್ಟ್‌  ವತಿಯಿಂದ ಗಿನ್ನೆಸ್‌ ದಾಖಲೆ ಸೃಷ್ಟಿಗಾಗಿ ಜೂನ್‌ 18ರಂದು 3,000 ಯೋಗ ಪಟುಗಳಿಂದ ಶೀರ್ಷಾಸನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

‘ಮೂರನೇ ಅಂತರರಾಷ್ಟ್ರೀಯ ಯೋಗ ದಿನದ ಪೂರ್ವಭಾವಿ ಕಾರ್ಯಕ್ರಮವಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 6.30ಕ್ಕೆ ಪುರಭವನದಿಂದ ಯೋಗಥಾನ್‌ ಆರಂಭವಾಗಲಿದೆ. 7.30ಕ್ಕೆ ವಿಧಾನಸೌಧದ ಪೂರ್ವ ಭಾಗದಲ್ಲಿ ಯೋಗಪಟುಗಳು 30 ಸೆಕೆಂಡ್‌ಗಳವರೆಗೆ ಶೀರ್ಷಾಸನ ಮಾಡಲಿದ್ದಾರೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಎನ್‌.ಆರಾಧ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈಗಾಗಲೇ ನೂರಾರು ಯೋಗ ಕೇಂದ್ರಗಳಲ್ಲಿ ಶೀರ್ಷಾಸನ ತರಬೇತಿ ನಡೆಸಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಪಾಲ್ಗೊಳ್ಳಬಹುದು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿಯಿಂದ ಯೋಗಪಟುಗಳು ಪಾಲ್ಗೊಳ್ಳಲಿದ್ದಾರೆ. ಆಂಧ್ರಪ್ರದೇಶದಿಂದಲೂ ಬರಲಿದ್ದಾರೆ’ ಎಂದು ಹೇಳಿದ್ದಾರೆ.

‘ಶೀರ್ಷಾಸನ ಮಾಡುವವರು www.yogagangotri.orgಯಲ್ಲಿ ಹೆಸರು ನೋಂದಾಯಿಸಬೇಕು. ಮೊಬೈಲ್‌ ಸಂಖ್ಯೆ 8884646108ಗೆ ಎಸ್‌ಎಂಎಸ್‌ ಕಳುಹಿಸಿ ನೋಂದಾಯಿಸಬಹುದು’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry