ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ

Last Updated 13 ಜೂನ್ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ಡಿ.ಎಚ್. ಶಂಕರಮೂರ್ತಿ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ಸದಸ್ಯರು ಮಂಗಳವಾರ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದರು. ಈ ಸಂದರ್ಭದಲ್ಲಿ  ಶಂಕರಮೂರ್ತಿ ಅವರೇ ಪೀಠದಲ್ಲಿ ದ್ದರು.

ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡುವ ಮುನ್ನ ಅವರು, ‘ವಿ.ಎಸ್. ಉಗ್ರಪ್ಪ ಹಾಗೂ ಇತರರು ನನ್ನ ವಿರುದ್ಧ ನೀಡಿರುವ ನಿರ್ಣಯದ ಸೂಚನೆಯು ಯಾವುದೇ ನಿರ್ದಿಷ್ಟ ಆರೋಪ ಅಥವಾ ಪ್ರಕರಣ ಒಳಗೊಂಡಿಲ್ಲ. ನಾನು ಉತ್ತರಿಸಲು ಸಾಧ್ಯವಾಗದಿರುವುದರಿಂದ ಈ ಸೂಚನೆಯು ಅರ್ಹ ಹಾಗೂ ಕ್ರಮಬದ್ಧ ಆಗಿರುವುದಿಲ್ಲ. ಆದಾಗ್ಯೂ ಸದನದ ಘನತೆ ಹಾಗೂ ಗಾಂಭೀರ್ಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ನಿರ್ಣಯ ಮಂಡಿಸಲು ಅವಕಾಶ ನೀಡುತ್ತಿದ್ದೇನೆ’ ಎಂದರು.

ಕಾಂಗ್ರೆಸ್‌ನ ಎಚ್.ಎಂ. ರೇವಣ್ಣ ನಿರ್ಣಯ ಮಂಡಿಸಿದರು. ಈ ನಿರ್ಣಯ ಬೆಂಬಲಿಸುವ ಸದಸ್ಯರು ತಮ್ಮ ಸ್ಥಾನದಲ್ಲಿ ಎದ್ದು ನಿಲ್ಲಬೇಕು ಎಂದು ಸಭಾಪತಿ ಕೋರಿದರು. ಆಗ ಕಾಂಗ್ರೆಸ್‌ನಿಂದ ಸುಮಾರು 30 ಸದಸ್ಯರು ಎದ್ದು ನಿಂತರು.

ಬಳಿಕ  ಶಂಕರಮೂರ್ತಿ, ‘ನಿರ್ಣಯ ಮಂಡನೆಗೆ ಅನುಮತಿ ನೀಡಲಾಗಿದೆ. ಶೀಘ್ರವೇ  ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್‌ ಸದಸ್ಯರು ತಮ್ಮ ಆಸನಗಳಲ್ಲಿ ಕುಳಿತಿದ್ದರು.

ಕಾಂಗ್ರೆಸ್ ಸದಸ್ಯರಿಗೆ ವಿಪ್‌ ಜಾರಿ: ‘ಅವಿಶ್ವಾಸ ನಿರ್ಣಯದ ಮೇಲೆ ಯಾವ ದಿನ ಬೇಕಾದರೂ ಚರ್ಚೆ ನಡೆದು ಮತದಾನ ಮಾಡುವ ಸಂದರ್ಭ ಬರಬಹುದು. ಆದ್ದರಿಂದ ಅಧಿವೇಶನ ಮುಗಿಯುವ ಜೂನ್ 21ರವರೆಗೆ ಎಲ್ಲ ಸದಸ್ಯರು ಕಡ್ಡಾಯವಾಗಿ ಸದನಕ್ಕೆ ಹಾಜರಾಗಬೇಕು’ ಎಂದು ಆಡಳಿತ ಪಕ್ಷದ ಸಚೇತಕ ಐವನ್ ಡಿಸೋಜಾ ಕಾಂಗ್ರೆಸ್‌ನ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದಾರೆ.

ಗೊಂದಲದಲ್ಲಿ ಜೆಡಿಎಸ್‌: ಶಂಕರ ಮೂರ್ತಿ  ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜೆಡಿಎಸ್‌ ಗೊಂದಲದಲ್ಲಿದೆ. ಮಂಗಳವಾರ ರಾತ್ರಿ ಪಕ್ಷದ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಸದಸ್ಯರ ಸಭೆ ನಡೆಸಿದರು. ಈ ವಿಷಯದಲ್ಲಿ ಒಮ್ಮತ ಮೂಡದ್ದರಿಂದ  ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರ ಸಲಹೆ ಪಡೆಯಲು ತೀರ್ಮಾ ನಿಸಲಾಯಿತು.

‘ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸಲು ಯಾವುದೇ ಕಾರಣವೂ ಕಾಣುತ್ತಿಲ್ಲ. ಅಲ್ಲದೆ, ಕಾಂಗ್ರೆಸ್‌ ನಾಯಕರು ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ತಮ್ಮ ಜೊತೆ ಚರ್ಚಿಸಿಲ್ಲ’ ಎಂದು ಕುಮಾರಸ್ವಾಮಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಬಲಾಬಲ(ಸಭಾಪತಿ ಸೇರಿ)
l ಕಾಂಗ್ರೆಸ್‌  33
l ಬಿಜೆಪಿ  23                    
l ಜೆಡಿಎಸ್‌  13
l ಪಕ್ಷೇತರರು  5
l ಖಾಲಿ ಸ್ಥಾನ  1
ಒಟ್ಟು  ಸಂಖ್ಯೆ  75

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT