ಗುಂಡಿನ ದಾಳಿ: ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದ ಸೇರಿ ಹಲವರಿಗೆ ಗಾಯ

7

ಗುಂಡಿನ ದಾಳಿ: ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದ ಸೇರಿ ಹಲವರಿಗೆ ಗಾಯ

Published:
Updated:
ಗುಂಡಿನ ದಾಳಿ: ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದ ಸೇರಿ ಹಲವರಿಗೆ ಗಾಯ

ವಾಷಿಂಗ್ಟನ್: ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದ ಸ್ಟೀವ್ ಸ್ಕಲೀಸ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಸಂಸದರ ನಡುವಣ ವಾರ್ಷಿಕ ಬೇಸ್‌ಬಾಲ್ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ.

ಈ ಬಗ್ಗೆ ರಿಪಬ್ಲಿಕನ್‌ ಪಕ್ಷದ  ಮತ್ತೊಬ್ಬ ಸಂಸದ ಮೊ ಬ್ರೂಕ್ಸ್ ಅವರು ಸಿಎನ್‌ಎನ್‌ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು, ಕನಿಷ್ಠ ಇಬ್ಬರು ಅಧಿಕಾರಿಗಳು ಮತ್ತು ಸಂಸತ್‌ನ ಒಬ್ಬ ಸಿಬ್ಬಂದಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ದಾಳಿಕೋರ ಮಧ್ಯವಯಸ್ಸಿನ ಬಿಳಿಯ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ವರ್ಜಿನಿಯಾ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry