‘ರಂಗಪಂಚಮಿ’ಯಿಂದ ಇಂದು ಪ್ರಶಸ್ತಿ ಪ್ರದಾನ

7

‘ರಂಗಪಂಚಮಿ’ಯಿಂದ ಇಂದು ಪ್ರಶಸ್ತಿ ಪ್ರದಾನ

Published:
Updated:
‘ರಂಗಪಂಚಮಿ’ಯಿಂದ ಇಂದು ಪ್ರಶಸ್ತಿ ಪ್ರದಾನ

ನಗರದ ಪ್ರತಿಷ್ಠಿತ ರಂಗತಂಡವಾದ ‘ರಂಗಪಂಚಮಿ’ಯು ತನ್ನ ಜನಪರ ಸಂಸ್ಕೃತಿ ಉತ್ಸವ 2017ರ ಅಂಗವಾಗಿ  ವಿವಿಧ ಕ್ಷೇತ್ರದ ಸಾಧಕರಿಗೆ ನಾಡಚೇತನ ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ರಂಗಚೇತನದ ಅಧ್ಯಕ್ಷ ಡಿ.ಕೆ.ಚೌಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಎಂ.ಎಸ್.ಅರ್ಚನಾ, ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಜಯದೇವ ಹೃದ್ರೋಗ ಸಂಸ್ಥೆಯ ನಿದೇಶಕ ಡಾ.ಸಿ.ಎನ್.ಮಂಜುನಾಥ್ ಜೂನ್‌ 15ರಂದು ಪ್ರಶಸ್ತಿ ಪ್ರದಾನ ಮಾಡುವರು. ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು.

ನಾಡಚೇತನ ಪ್ರಶಸ್ತಿಗೆ ಹಿರಿಯ ಎಂಜಿನಿಯರ್ ಎಲ್.ಶಿವಲಿಂಗಯ್ಯ, ಮೂಳೆತಜ್ಞ ಡಾ.ಎಚ್.ಎಸ್. ಚಂದ್ರಶೇಖರ್, ಹಿರಿಯ ಆಡಳಿತಾಧಿಕಾರಿ ಎಂ.ಆರ್.ಏಕಾಂತಪ್ಪ, ರಾಜಕೀಯ ನಾಯಕ ವೆಂಕಟೇಶ್ ಕುಮಾರ್ ಹಾಗೂ ಕನ್ನಡ ಅನುಷ್ಠಾನ ಸಂಸ್ಥೆಯ ಆರ್.ಎ.ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಪಂಚಮಿ ಸಂಚಾಲಕ ತೊಟ್ಟವಾಡಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

ಎಂ.ವಿ. ರೇವಣಸಿದ್ದಯ್ಯ ದತ್ತಿನಿಧಿಯಿಂದ ಸ್ಥಾಪಿಸಿರುವ ‘ನ್ಯಾಯಚೇತನ ರತ್ನ ಪ್ರಶಸ್ತಿ’ಗೆ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ‘ಚಿತ್ರರತ್ನ’ ಪ್ರಶಸ್ತಿಗೆ ಪಂಚಭಾಷೆ ತಾರೆ ಜಯಂತಿ, ‘ಮಾಧ್ಯಮ ರತ್ನ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ, ‘ರಂಗಚೇತನ ರತ್ನ’ ಪ್ರಶಸ್ತಿಗೆ ಸಾಗರದ ಎಂ.ವಿ.ಪ್ರತಿಭಾ ಹಾಗೂ ‘ಸಿಜಿಕೆ ಪ್ರಶಸ್ತಿ’ಗೆ ಪ್ರಸಾಧನ ಕಲಾವಿದ ರಾಮಕೃಷ್ಣ ಬೆಳ್ತೂರು ಅವರನ್ನು ಆಯ್ಕೆ ಮಾಡಲಾಗಿದೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ.

ಸಮಯ: ಸಂಜೆ 7.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry