ರಜೆ ಮೇಲೆ ತೆರಳಿರುವ ಪಿಯು ಉಪನ್ಯಾಸಕರಿಗೆ ಶೀಘ್ರ ವೇತನ

7

ರಜೆ ಮೇಲೆ ತೆರಳಿರುವ ಪಿಯು ಉಪನ್ಯಾಸಕರಿಗೆ ಶೀಘ್ರ ವೇತನ

Published:
Updated:
ರಜೆ ಮೇಲೆ ತೆರಳಿರುವ ಪಿಯು ಉಪನ್ಯಾಸಕರಿಗೆ ಶೀಘ್ರ ವೇತನ

ಬೆಂಗಳೂರು: ಬಿ.ಇಡಿ ಪದವಿ ಪಡೆಯಲು ರಜೆ ಮೇಲೆ ಇರುವಂತಹ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಶೇ 50ರಷ್ಟು ವೇತನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಸಚಿವ ತನ್ವೀರ್ ಸೇಠ್‌ ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

2013ನೇ ಸಾಲಿನಲ್ಲಿ ನೇಮಕವಾದ 1,763 ಉಪನ್ಯಾಸಕರ ಪೈಕಿ 733 ಉಪನ್ಯಾಸಕರು ಬಿ.ಇಡಿ ಪದವಿ ಪಡೆದಿಲ್ಲ. 4 ವರ್ಷದೊಳಗೆ ಪದವಿ ಪಡೆಯಬೇಕು ಎಂದು ಅವರಿಂದ ಮುಚ್ಚಳಿಕೆ ಬರೆಸಿಕೊಂಡು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

‘2009ನೇ ಸಾಲಿನಲ್ಲಿ ಬಿ.ಇಡಿ ಪದವಿ ಪಡೆಯದ ಉಪನ್ಯಾಸಕರಿಗೆ ಪೂರ್ಣ ವೇತನ ಸಹಿತ ರಜೆ ಮೇಲೆ ಕಳುಹಿಸಲಾಗಿತ್ತು. ಅದನ್ನೇ ಇಲ್ಲೂ ಅನುಸರಿಸಬೇಕು’ ಎಂದು ಶ್ರೀಕಂಠೇಗೌಡ ಒತ್ತಾಯಿಸಿದರು.

‘ಪಿಯು ಉಪನ್ಯಾಸಕ ಹುದ್ದೆಗೆ 2008ರಲ್ಲಿ ಬಿ.ಇಡಿ ಕಡ್ಡಾಯ ಮಾಡಿ ಆದೇಶ ಮಾಡಲಾಗಿದೆ. 2009ನೇ ಸಾಲಿನಲ್ಲಿ ನೇಮಕ ಆದವರಿಗೆ ವಿನಾಯಿತಿ ನೀಡಿ, ಬಳಿಕ ಕಡ್ಡಾಯವಾಗಿ ಪದವಿ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ, ಆಗ ಕೊಟ್ಟಂತೆ ಪೂರ್ಣ ವೇತನ ಈಗಲೂ ಕೊಡಲು ಸಾಧ್ಯವಿಲ್ಲ’ ಎಂದು ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry