ಜೀವ ಉಳಿಸಲು ರಕ್ತದಾನ ಮಾಡಿ

7
ವಿಶ್ವ ರಕ್ತದಾನಿಗಳ ದಿನಾಚರಣೆ: ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಸಲಹೆ

ಜೀವ ಉಳಿಸಲು ರಕ್ತದಾನ ಮಾಡಿ

Published:
Updated:
ಜೀವ ಉಳಿಸಲು ರಕ್ತದಾನ ಮಾಡಿ

ಉಡುಪಿ: ‘ಅಮೂಲ್ಯವಾದ ಜೀವವನ್ನು ಉಳಿಸಲು ಎಲ್ಲರೂ ರಕ್ತದಾನ ಮಾಡಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಸಲಹೆ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಘಟಕ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.‘ರಕ್ತದಾನ ಮಾಡುವುದರಿಂದ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಸಿಗುತ್ತದೆ, ಶುದ್ಧ ರಕ್ತ ಹೊಸದಾಗಿ ಸೇರ್ಪಡೆಯಾಗುವುದರಿಂದ ದಾನಿಗೂ ಇದರಿಂದ ಉಪಯೋಗ ಇದೆ. ಕೆಲವು ಕಾಯಿಲೆಗಳು ಸಹ ದೂರಾಗುತ್ತವೆ. 56 ದಿನಕ್ಕೊಮ್ಮೆ ರಕ್ತದಾನ ಮಾಡಲು ಅವಕಾಶ ಇದೆ. ಈ ಅವಕಾಶವನ್ನು ಬಳಸಿಕೊಂಡು ರಕ್ತದ ಕೊರತೆ ನೀಗಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.ಸಾಮಾಜಿಕ ಕಾರ್ಯಕರ್ತ ಡಾ. ಅಮ್ಮುಂಜೆ ಅರವಿಂದ ನಾಯಕ್ ಮಾತನಾಡಿ, ‘ರಕ್ತಕ್ಕೆ ಪರ್ಯಾಯ ಇನ್ನೊಂದಿಲ್ಲ. ಎಲ್ಲರೂ ಆಗಾಗ್ಗೆ ರಕ್ತದಾನ ಮಾಡುವ ಮೂಲಕ ಕೊರತೆ ನೀಗಿಸಲು ಪ್ರಯತ್ನಿಸಬೇಕು’ ಎಂದರು.ರಕ್ತದಾನಿಗಳಾದ ತೋನ್ಸೆ ನರಹರಿ ಪೈ, ಮುದರಂಗಡಿ ದೇವದಾಸ್ ಪಾಟ್ಕರ್, ವಿದ್ಯಾರ್ಥಿ ದಾನಿಗಳಾದ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಬ್ರಾಂಡನ್ ಲೋಬೊ, ಬ್ಲೆನ್ಸಿಲ್ ಲೆವಿಸ್‌, ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜಿನ ಶೈಲೇಶ್ ಕುಂದರ್, ಅಭಿಷೇಕ್ ಆರ್ ಜತ್ತನ್ನ, ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವಾಸ್‌, ಶ್ರೀನಾಥ್ ಪ್ರಭು, ನಾಗೇಶ್ ಅವರನ್ನು ಸನ್ಮಾನಿಸಲಾಯಿತು.ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಡಾ. ಉಮೇಶ್ ಪ್ರಭು, ಉಪಾಧ್ಯಕ್ಷ ಡಾ. ವೈ.ಜಿ ಅಶೋಕ್ ಕುಮಾರ್ ಗೌರವ ಕಾರ್ಯದರ್ಶಿ ಜಿ.ಸಿ.ಜನಾರ್ದನ, ಪ್ರತಿಭ, ಪ್ರಿಯಾಂಖ, ಸ್ವಾತಿ, ದಿವ್ಯ, ಜಯರಾಮ್ ಆಚಾರ್ಯ ಸಾಲಿಗ್ರಾಮ. ಇದ್ದರು.

*

ರಕ್ತದಾನದಿಂದ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಕೆಲವು ರೋಗಗಳಿಂದ ದೂರ ಇರಬಹುದು.

-ಲತಾ,

ಹಿರಿಯ ಸಿವಿಲ್ ನ್ಯಾಯಾಧೀಶೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry