ಬೇಟೆಗಾರರು ಹಾರಿಸಿದ ಗುಂಡು ತಗುಲಿ ಯುವಕ ಸಾವು

7

ಬೇಟೆಗಾರರು ಹಾರಿಸಿದ ಗುಂಡು ತಗುಲಿ ಯುವಕ ಸಾವು

Published:
Updated:
ಬೇಟೆಗಾರರು ಹಾರಿಸಿದ ಗುಂಡು ತಗುಲಿ ಯುವಕ ಸಾವು

ಉಡುಪಿ: ಶಿಕಾರಿಗೆ ಬಂದಿದ್ದ ಯುವಕರು ಹಾರಿಸಿದ ಗುಂಡು ತಗುಲಿ ರವಿ (32) ಎಂಬುವರು ಮೃತಪಟ್ಟಿರುವ ಘಟನೆ ಕಾರ್ಕಳ ತಾಲ್ಲೂಕಿನ ಕಡ್ತಲ ಅರಣ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ.

ಆರೋಪಿಗಳಾದ ಸುಂದರ ನಾಯ್ಕ ಮತ್ತು ಜಿತು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಮರ ಕಡಿಯಲು ಬಂದಿದ್ದ ರವಿ, ಶಿಕಾರಿಗೆ ಬಂದಿದ್ದವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಎಂದು ಭಾವಿಸಿ ಅಲ್ಲಿಂದ ಓಡಲು ಪ್ರಯತ್ನಿಸಿದ್ದಾರೆ. ಪ್ರಾಣಿಯೇ ಓಡುತ್ತಿರಬೇಕು ಎಂಬ ಭಾವಿಸಿದ ಯುವಕರು ಹಾರಿಸಿದ ಗುಂಡು ತಗುಲಿ ಮೃತಪಟ್ಟಿದ್ದಾರೆ.

ಮರ ಕಡಿಯಲು ತಂದಿದ್ದ ಗರಗಸ ಮುಂತಾದ ಆಯುಧಗಳನ್ನು ಅಜೆಕಾರು ಪೊಲೀಸರು ಜಪ್ತಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry