ಫೈನಲ್‌ ಪ್ರವೇಶಿಸಿದ ಟೀಂ ಇಂಡಿಯಾಗೆ ಹಿರಿಯ ಆಟಗಾರರ ಮೆಚ್ಚುಗೆ

7

ಫೈನಲ್‌ ಪ್ರವೇಶಿಸಿದ ಟೀಂ ಇಂಡಿಯಾಗೆ ಹಿರಿಯ ಆಟಗಾರರ ಮೆಚ್ಚುಗೆ

Published:
Updated:
ಫೈನಲ್‌ ಪ್ರವೇಶಿಸಿದ ಟೀಂ ಇಂಡಿಯಾಗೆ ಹಿರಿಯ ಆಟಗಾರರ ಮೆಚ್ಚುಗೆ

ಬರ್ಮಿಂಗ್‌ಹ್ಯಾಮ್‌: ಎಜ್‌ಬಾಸ್ಟನ್‌ನಲ್ಲಿ ಗುರುವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಮುಂದಿಟ್ಟ 265 ರನ್‌ಗಳ ಗುರಿಯನ್ನು ಹಾಲಿ ಚಾಂಪಿಯನ್ನರು 40.1 ಓವರ್‌ಗಳಲ್ಲಿ ದಾಟಿದರು. ಬಾಂಗ್ಲಾ ವಿರುದ್ಧ ಭಾರತ 9 ವಿಕೆಟ್‌ ಜಯ ಸಾಧಿಸಿ ಫೈನಲ್‌ ಪ್ರವೇಶಿಸಿತ್ತು.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್‌ ಪ್ರವೇಶಿಸಿರುವ ಕೊಹ್ಲಿ ಪಡೆಗೆ ಟೀಂ ಇಂಡಿಯಾದ ಹಿರಿಯ ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್‌, ಪಾಕ್‌ ಆಟಗಾರ ಶಾಹೀದ್‌ ಅಫ್ರಿದಿ, ಹರ್ಭಜನ್‌ ಸಿಂಗ್‌, ಸುರೇಶ್‌ ರೈನಾ ಶುಭ ಹಾರೈಸಿದ್ದಾರೆ.

‘ಹೆಮ್ಮೆಯ ಸಂಗತಿ, ಉತ್ತಮ ಪ್ರದರ್ಶನ ನೀಡಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡಕ್ಕೆ ಅಭಿನಂದನೆಗಳು. ಪಾಕ್‌ ವಿರುದ್ಧದ ಫೈನಲ್‌ ಪಂದ್ಯಕ್ಕೂ ನನ್ನ ಶುಭಾಶಯಗಳು’ ಎಂದು ಸಚಿನ್‌ ಟ್ವೀಟ್‌ ಮಾಡಿದ್ದಾರೆ. 

‘ಬಾಂಗ್ಲಾ ವಿರುದ್ಧದ ಆಮೋಘ ಆಟ ಆಡಿದ ಭಾರತದ ಇನಿಂಗ್ಸ್‌ ಅವಿಸ್ಮರಣೀಯ, ತಂಡಕ್ಕೆ ಅಭಿನಂದನೆಗಳು’ ಎಂದು ಸುರೇಶ್‌ ರೈನಾ ಟ್ವೀಟ್‌ ಮಾಡಿದ್ದಾರೆ.

‘ಫೈನಲ್‌ನಲ್ಲಿ ಹಸಿರು ಜರ್ಸಿಯ ಪಾಕ್‌ ವಿರುದ್ಧ ಜಯ ಸಾಧಿಸುವ ಮೂಲಕ ಭಾರತ ಹ್ಯಾಟ್ರಿಕ್‌ ಸಾಧನೆ( ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಪಾಕಿಸ್ತಾನ) ಮಾಡಲಿದೆ’ ಎಂದು ಹಿರಿಯ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

‘ಬಾಂಗ್ಲಾ ವಿರುದ್ಧ ಭಾರತ ತಂಡದ ಆಟ ಉತ್ತಮವಾಗಿತ್ತು. ಈಗ ಇಂಡೋ–ಪಾಕ್‌ ಫೈನಲ್‌ ಪಂದ್ಯದ ಮೇಲೆ ಎಲ್ಲರ ಗಮನ’ ಎಂದು ಪಾಕ್‌ನ ಮಾಜಿ ನಾಯಕ ಶಾಹೀದ್‌ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry