ಆನ್‌ಲೈನ್‌ ಓದುಗರ ನೆಚ್ಚಿನ ‘ಪ್ರತಿಲಿಪಿ’

7

ಆನ್‌ಲೈನ್‌ ಓದುಗರ ನೆಚ್ಚಿನ ‘ಪ್ರತಿಲಿಪಿ’

Published:
Updated:
ಆನ್‌ಲೈನ್‌ ಓದುಗರ ನೆಚ್ಚಿನ ‘ಪ್ರತಿಲಿಪಿ’

ಆನ್‌ಲೈನ್‌ ಓದುಗರಿಗೆ ವಿಶಿಷ್ಟ ಓದಿನ ಅನುಭವ ನೀಡುವ ಹಾಗೂ ಬರಹಗಾರರನ್ನು ಉತ್ತೇಜಿಸುವ ಆ್ಯಪ್‌ ಒಂದು ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಪ್ಲೇಸ್ಟೋರ್‌ನಲ್ಲಿ ಉಚಿತ ಡೌನ್‌ಲೋಡ್‌ಗೆ ಸಿಗುವ ಈ ಆ್ಯಪ್‌ ಹೆಸರು ‘ಪ್ರತಿಲಿಪಿ’.

ದೇಶೀಯ ಭಾಷೆಗಳ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಈ ಆ್ಯಪ್‌ ಕನ್ನಡ, ಹಿಂದಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ ಭಾಷೆಗಳಲ್ಲಿ ಲಭ್ಯವಿದೆ. ಡೌನ್‌ಲೋಡ್ ಮಾಡಿದ ನಂತರ ಇಷ್ಟದ ಭಾಷೆಯನ್ನು ಆಯ್ದುಕೊಂಡರೆ ಇಲ್ಲಿ ಹೆಸರಾಂತ ಮತ್ತು ಹಲವು ಉದಯೋನ್ಮುಖ ಸಾಹಿತಿಗಳ ಸುಮಾರು 45,000ಕ್ಕೂ ಹೆಚ್ಚು  ಬರಹಗಳು ಓದಲು ಸಿಗುತ್ತವೆ.

ಪ್ರತಿ ಬರಹವನ್ನು ಅದರಲ್ಲಿರುವ ವಿಷಯಕ್ಕೆ ಅನುಗುಣವಾಗಿ ಪ್ರೀತಿ, ಸಿನಿಮಾ, ಪ್ರವಾಸ, ಆರೋಗ್ಯ, ಮಹಿಳೆ, ಮಕ್ಕಳು ಹೀಗೆ ಹಲವು ವಿಭಾಗಗಳನ್ನಾಗಿ ಪ್ರತ್ಯೇಕಿಸಲಾಗಿದ್ದು, ಓದುಗರು ತಮ್ಮ ಅಭಿರುಚಿಗೆ ತಕ್ಕಂತೆ ತಮ್ಮಿಷ್ಟದ ವಿಭಾಗವನ್ನು ಆಯ್ದುಕೊಳ್ಳಬಹುದು. ಹೆಚ್ಚಿನವರಿಂದ ಓದಿಸಿಕೊಂಡ ಬರಹಗಳನ್ನು ಓದಲು ಸೂಚಿಸುವ ಇಲ್ಲಿ, ಪ್ರತಿಯೊಂದು ಬರಹವೂ ತಮ್ಮದೇ ನೆಲೆಯಲ್ಲಿ ಓದಿಸಿಕೊಂಡು ಆ್ಯಪ್‌ನಲ್ಲಿರುವ ಲೈಬ್ರರಿಯಲ್ಲಿ ಉಳಿಯುತ್ತವೆ.

ಒಮ್ಮೆ ಓದಿ ಇಷ್ಟವಾದ ಲೇಖನವನ್ನು ಮತ್ತೆ ಮತ್ತೆ ಓದಬೇಕೆನಿಸಿದರೆ ಗುರುತು ಮಾಡಿ ಇಡಬಹುದು. ಜತೆಗೆ ಅಂತಹ ಬರಹಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿ ಇತರರೂ ಓದುವಂತೆ ಮಾಡಬಹುದು.

ಬರಹಗಾರರಿಗೆ ಸಲಹೆ ನೀಡಲು, ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ಅಂಕ ನೀಡಲು ಅವಕಾಶಗಳಿವೆ.

ಇದರ ಮತ್ತೊಂದು ವಿಶೇಷವೆಂದರೆ ಏನನ್ನಾದರು ಬರೆಯಲು ಒಳ್ಳೆಯ ವೇದಿಕೆಗಾಗಿ ಕಾಯುತ್ತಿರುವವರು ತಮ್ಮ ಮನದಲ್ಲಿರುವ ಭಾವನೆಗಳಿಗೆ ಬರಹದ ರೂಪ ನೀಡಿ ಇಲ್ಲಿ ತಮ್ಮದೇ ಖಾತೆಯ ಮೂಲಕ ಹಂಚಿಕೊಂಡು ಓದುಗರ ಮುಂದಿಡಬಹುದು. ಎಷ್ಟು ಜನರಿಗೆ​ ನಿಮ್ಮ ಬರಹ ಇಷ್ಟವಾಗಿದೆ, ಎಷ್ಟು ಅಂಕ ಸಿಕ್ಕಿದೆ, ನಿಮ್ಮ ಬೆನ್ನಿಗೆ ಬಿದ್ದವರೆಷ್ಟು ಎಂಬುದನ್ನೂ ತಿಳಿಯಬಹುದು.

ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಆ್ಯಪ್‌ ವತಿಯಿಂದ ಆಗಾಗ ಕತೆ, ಕವನಗಳ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಸದ್ಯ ‘ಸಾಲುದೀಪ ಆನ್‌ಲೈನ್‌ ಕವನ ಸ್ಪರ್ಧೆ 2017’ ಅನ್ನು ಪ್ರಕಟಿಸಿದ್ದು ನಿಮ್ಮಲ್ಲಿರುವ ಯಾವುದೇ

ಪ್ರಕಾರದ ಕವಿತೆಯನ್ನು ಇದೇ ತಿಂಗಳ 26ರ ಒಳಗೆ kannada@pratilipi.comಗೆ ಕಳುಹಿಸಬಹುದು.

ಇಷ್ಟೆಲ್ಲಾ ಅವಕಾಶಗಳಿದ್ದರೂ ಇಂಟರ್ನೆಟ್‌ ಇಲ್ಲದೆ ಆ್ಯಪ್‌ ಬಳಸಲು ಸಾಧ್ಯವಿಲ್ಲ ಎಂಬುದು ಚೂರು ಬೇಸರದ ಸಂಗತಿ. ಆದರೂ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು  ಡೌನ್‌ಲೋಡ್‌ ಕಂಡಿರುವ ಈ ಆ್ಯಪ್ ಆನ್‌ಲೈನ್‌ ಓದುಗರಿಂದ 4.8 ರೇಟಿಂಗ್ಸ್ ಗಿಟ್ಟಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry