ಹೆಸರಿನ ಹಿಂದಿನ ಕತೆ

7

ಹೆಸರಿನ ಹಿಂದಿನ ಕತೆ

Published:
Updated:
ಹೆಸರಿನ ಹಿಂದಿನ ಕತೆ

ಐಕಿಯಾ

ಪೀಠೋಪಕರಣಗಳ ತಯಾರಿಕಾ ಸಂಸ್ಥೆ ‘ಐಕಿಯಾ’ (IKEA) ಹೆಸರು ಸಂಸ್ಥೆಯ ಕಾರ್ಯಶೈಲಿಯೊಂದಿಗೆ ಏನೂ ಸಂಬಂಧ ಹೊಂದಿಲ್ಲ. ಸಂಸ್ಥೆಯ ಸ್ಥಾಪಕ ಇಂಗ್ವರ್ ಕಂಪ್ರಾಡ್ ತನ್ನ ಹೆಸರಿನ ಮೊದಲ ಎರಡು ಅಕ್ಷರಗಳು ಹಾಗೂ ತನ್ನ ಹಳ್ಳಿ ಇಲ್ಮಾಟ್ರೇಡ್ ಅಗುನ್‌ಯಾರ್ಡಿಯದ ಮೊದಲ ಎರಡು ಅಕ್ಷರಗಳನ್ನು ಸೇರಿಸಿ ‘ಐಕೆಇಎ’ ಎಂದು ಹೆಸರಿಟ್ಟಿದ್ದಾರೆ.

***

ಫೋಕ್ಸ್‌ವ್ಯಾಗನ್

ಜರ್ಮನಿಯ ಕಾರ್ ಕಂಪೆನಿ ಫೋಕ್ಸ್‌ವ್ಯಾಗನ್‌ನ ಮೂಲ ಅರ್ಥ ಜನರ ಕಾರು ಎಂದು.

ಅಡೋಬ್

ವಿಡಿಯೊ, ಪಿಡಿಎಫ್ ಪೈಲ್‌ಗಳ ಸೇವೆ ಒದಗಿಸುವ ಅಡೋಬ್ ಅದನ್ನು ಕಂಡು ಹಿಡಿದ ಅಡೋಬ್ ಕ್ರೀಕ್ ಹೆಸರನ್ನೇ ಇಡಲಾಗಿದೆ.

**

ಅಮೆಜಾನ್

ಸಂಸ್ಥೆಯ ಸಂಸ್ಥಾಪಕ ಜೆಫ್‌ ಬಿಜಾಸ್ ‘ಎ’ ಅಕ್ಷರದಿಂದಲೇ ಪ್ರಾರಂಭವಾಗುವ ಹೆಸರನ್ನು ಸಂಸ್ಥೆಗೆ ಇಡಲೆಂದು ಹುಡುಕುತ್ತಿದ್ದಾಗ ಉದ್ದದ ನದಿಗಳಲ್ಲೊಂದಾದ Amazon ಹೆಸರು ಇಷ್ಟವಾಗಿ ಅದೇ ಹೆಸರಿಗೆ ಅಂಟಿಕೊಂಡರು.

**

ಕೊಕಾಕೋಲಾ

ಕೊಕಾ ಎಲೆಗಳು ಮತ್ತು ಕೋಲಾದ ಬೀಜಗಳನ್ನು ಬಳಸಿ ಪಾನೀಯವನ್ನು ತಯಾರು ಮಾಡುತ್ತಿದ್ದ ಕಾರಣ ಕೊಕೊಕೋಲಾ ಎಂದು ಹೆಸರಿಟ್ಟರು ಸಂಸ್ಥೆಯ ಸಂಸ್ಥಾಪಕ ಜಾನ್ ಎಸ್. ಪೆನ್‌ಬರ್ಟನ್.

**

ಇಂಟೆಲ್

ಖ್ಯಾತ ಸಾಫ್ಟ್‌ವೇರ್ ಕಂಪೆನಿಯ ಇಂಟೆಲ್‌, ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ಸ್‌ನ ಸಂಕುಚಿತ ರೂಪ.

**

ಸ್ಟಾರ್ ಬಕ್ಸ್‌

ದುಬಾರಿ ಕಾಫಿಶಾಪ್‌ ಎನಿಸಿಕೊಂಡಿರುವ ಸ್ಟಾರ್‌ಬಕ್ಸ್‌ಗೆ ಈ ಹೆಸರು ಬರಲು ಕಾರಣ ಸಂಸ್ಥೆಯ ಮಾಲೀಕನ ಸಾಹಿತ್ಯ ಪ್ರೀತಿ.

‘ಮೋಡಿ–ಡಿಕ್’ ಕಾದಂಬರಿಯ ಮಹಿಳಾ ಪಾತ್ರವನ್ನು ಬಹುವಾಗಿ ಮೆಚ್ಚಿದ್ದ ಆತ ತನ್ನ ಕಂಪೆನಿಗೆ ಅವಳದೇ ಹೆಸರಿಟ್ಟ.

**

ವೊಡಾಫೋನ್

ವಾಯ್ಸ್‌, ಡಾಟಾ, ಟೆಲಿಫೋನ್‌ಗಳ ಸಂಕುಚಿತ ರೂಪ ವೊಡಾಫೋನ್‌.

**

ಆ್ಯಪಲ್

ನ್ಯೂಟನ್ ತಲೆಯ ಮೇಲೆ ಬಿದ್ದ ಸೇಬು ವಿಜ್ಞಾನಕ್ಕೆ ಹೊಸ ದಿಕ್ಕು ನೀಡಿತು. ಹಾಗಾಗಿ ಹೊಸ ವಿಚಾರ, ಸಂಶೋಧನೆಗಳನ್ನು ಪ್ರತಿನಿಧಿಸುವ ಉದ್ದೇಶದಿಂದ ಸ್ಟೀವ್ ಜಾಬ್ಸ್ ತಮ್ಮ ಸಂಸ್ಥೆಗೆ ಆ್ಯಪಲ್ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗುತ್ತದೆ. ಆದರೆ ನಿಜವೆಂದರೆ ಸ್ಟೀವ್ ಜಾಬ್ಸ್‌ ಸೇಬು ತೋಟಕ್ಕೆ ಹೋಗಿ ಬಂದರೆ ನಮ್ಮ ಕಂಪೆನಿ ಹೆಸರು ಆ್ಯಪಲ್ ಆಗಿರಲಿದೆ ಎಂದು ತನ್ನ ಸಹೋದ್ಯೋಗಿಗಳಿಗೆ ಹೇಳಿದರಂತೆ. ಹೆಸರಿನ ಬಗ್ಗೆ ಅವರು ಹೆಚ್ಚೇನು ಯೋಚಿಸಲೇ ಇಲ್ಲವಂತೆ ಇದನ್ನು  ಅವರ ಬಯೋಗ್ರಫಿಯಲ್ಲಿ ಹೇಳಿದ್ದಾರೆ.

**

ಪೆಪ್ಸಿ

ಮಾನವ ತಿಂದ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುವ ಪೆಪ್ಸೈನ್‌ ಎಂಬ ದ್ರವದ ಹೆಸರಿನಿಂದ ಸ್ಫೂರ್ತಿ ಪಡೆದು ತಂಪುಪಾನಿಯ ಪೆಪ್ಸಿ ಹೆಸರು ಇಡಲಾಯಿತು.

ಆಹಾರದ ಪ್ರೊಟೀನ್‌ಗಳನ್ನು ಸಣ್ಣ ಸಣ್ಣದಾಗಿ ಒಡೆದು ಅವು ದೇಹ ಸೇರಲು ಈ ಪೆಪ್ಸೈನ್‌ ಸಹಾಯ ಮಾಡುತ್ತದೆ.

**

ಮೈಕ್ರೊಸಾಫ್ಟ್‌

ಮೈಕ್ರೊ ಕಂಪ್ಯೂಟರ್‌ಗಳ ಅಂದರೆ ಆಧುನಿಕ ಮಾದರಿಯ ಕಂಪ್ಯೂಟರ್‌ಗಳ ಸಾಫ್ಟ್‌ವೇರ್ ಉತ್ಪಾದನಾ ಸಂಸ್ಥೆ ಎಂದು ಅರ್ಥ ನೀಡುವಂತೆ ಬಿಲ್‌ಗೇಟ್ಸ್ ಮೈಕ್ರೊಸಾಫ್ಟ್‌ ಹೆಸರಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry