ಮೇಕೆ ನುಂಗಿದ ಹೆಬ್ಬಾವು ಸುಸ್ತೋ ಸುಸ್ತು...; ವಿಡಿಯೊ ವೈರಲ್‌

7

ಮೇಕೆ ನುಂಗಿದ ಹೆಬ್ಬಾವು ಸುಸ್ತೋ ಸುಸ್ತು...; ವಿಡಿಯೊ ವೈರಲ್‌

Published:
Updated:
ಮೇಕೆ ನುಂಗಿದ ಹೆಬ್ಬಾವು ಸುಸ್ತೋ ಸುಸ್ತು...; ವಿಡಿಯೊ ವೈರಲ್‌

ಅಸ್ಸಾಂ: ದೈತ್ಯ ಹೆಬ್ಬಾವೊಂದು ಆಡನ್ನು ನುಂಗಿ ಹಿಂದೆ–ಮುಂದೆ ಹೋಗಲಾರದೇ ನರಳಾಡಿದ ಘಟನೆಯ ವಿಡಿಯೊ ಚಿತ್ರೀಕರಿಸಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬೈಹಾಟಾ ಚರಿಯಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 15 ಅಡಿ ಉದ್ದದ ಹೆಬ್ಬಾವು ಹೊಟ್ಟೆ ಊದಿಕೊಂಡು ಚಲಿಸಲಾಗದೇ ಹೊರಳಾಡುತಿತ್ತು. ಹಾವು ಹತ್ತಿರದ ಕಾಡಿನಿಂದ ಗ್ರಾಮಕ್ಕೆ ಬಂದು ಮೇಕೆಯೊಂದನ್ನು ನುಂಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

‌ಘಟನೆ ನಂತರ ಗ್ರಾಮಸ್ಥರು ಹಾವಿನ ತಲೆಗೆ ಹಗ್ಗ ಕಟ್ಟಿಕೊಂಡು ಆರಣ್ಯ ಅಧಿಕಾರಿಗಳ ಬಳಿ ಚಿಕಿತ್ಸೆಗೆ ಕೊಂಡೊಯ್ದಿದ್ದಾರೆ. ನಂತರ ಹಾವನ್ನು ಹತ್ತಿರದ ಕಾಡಿಗೆ ಬಿಟ್ಟು ಬಂದಿದ್ದಾರೆ.

ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈವರೆಗೆ 72 ಸಾವಿರ ಜನ ವೀಕ್ಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry