ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್‌ ಟ್ರೋಫಿ: ಇಂಡೋ–ಪಾಕ್‌ ಫೈನಲ್‌ ಕದನಕ್ಕೆ ₹ 2 ಸಾವಿರ ಕೋಟಿಗೂ ಅಧಿಕ ಬೆಟ್ಟಿಂಗ್‌?

Last Updated 17 ಜೂನ್ 2017, 10:47 IST
ಅಕ್ಷರ ಗಾತ್ರ

ನವದೆಹಲಿ: ಲಂಡನ್‌ನಲ್ಲಿ ಜೂನ್‌ 18ರಂದು ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಭಾರತ– ಪಾಕಿಸ್ತಾನ ತಂಡಗಳ ಮುಖಾಮುಖಿಯಾಗಲಿವೆ.

ಈ ಪಂದ್ಯಕ್ಕೆ ₹ 2 ಸಾವಿರ ಕೋಟಿ ಬೆಟ್ಟಿಂಗ್‌ ನಡೆಯಲಿದೆ ಎಂದು ‘ಅಲ್‌ ಇಂಡಿಯನ್‌ ಗೇಮಿಂಗ್‌ ಫೆಡರೇಷನ್‌(ಎಐಜಿಎಫ್‌)’ ವಿಶ್ಲೇಷಿಸಿದೆ.

ಬೆಟ್ಟಿಂಗ್‌ ಬುಕ್ಕಿಗಳಿಗೆ ಭಾರತ ಹೆಚ್ಚು ಪ್ರಖ್ಯಾತಿ ಪಡೆದ ತಂಡವಾಗಿದೆ. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ₹100 ಬೆಟ್ಟಿಂಗ್‌ ಕಟ್ಟಿದ ವ್ಯಕ್ತಿಗೆ ₹147 ಸಿಗಲಿದೆ. ಇದೇ ವೇಳೆ ಪಾಕ್‌ ಗೆದ್ದರೆ ₹ 300 ಗಳಿಸಲಿದ್ದಾರೆ ಎಂದು ವಿಶ್ಲೇಷಕರು ವಿವರಿಸಿದ್ದಾರೆ.

'ಒಂದು ವರ್ಷದಲ್ಲಿ ಭಾರತದ ಕ್ರಿಕೆಟ್‌ ತಂಡ ಆಡುವ ಎಲ್ಲ ಪಂದ್ಯಗಳ ಮೇಲೆ ಒಟ್ಟು ₹ 2 ಲಕ್ಷ ಕೋಟಿ ಬೆಟ್ಟಿಂಗ್‌ ಕಟ್ಟಲಾಗುತ್ತದೆ' ಎಂದು ಎಐಜಿಎಫ್‌ನ ಸಿಇಒ ರೋಲ್ಯಾಂಡ್ ಲ್ಯಾಂಡರ್ಸ್ ತಿಳಿಸಿದ್ದಾರೆ.

'ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಇದೇ‌ ಮೊದಲ ಬಾರಿಗೆ ಭಾರತ– ಪಾಕಿಸ್ತಾನ ತಂಡಗಳು ಫೈನಲ್‌ ಪ್ರವೇಶಿಸಿದ್ದು, ಈ ಬಾರಿ ಹೆಚ್ಚು ಬೆಟ್ಟಿಂಗ್‌ ನಡೆಯಲಿದೆ' ಎಂದು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT