‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

7

‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

Published:
Updated:
‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

ಕಾಲೇಜಿನ ಶುಲ್ಕ ಕಟ್ಟಿದೆ. ಪ್ರಥಮ ಪಿಯು ಪರೀಕ್ಷೆಯಲ್ಲಿ ಶೇ 91 ಅಂಕ ಪಡೆದಿದ್ದೇನೆ. ಉಳಿದ ಹಣದಲ್ಲಿ ಸಿಇಟಿ ಮತ್ತು ನೀಟ್ ಕೋಚಿಂಗ್‌ ಶುಲ್ಕ ಕಟ್ಟುವೆ.

ಬಿ.ಎಚ್.ಹರ್ಷಿತಾ, ಬಿದರಗಡ್ಡೆ, ಸುಂಕದಕಟ್ಟೆ, ಹೊನ್ನಾಳಿ ತಾಲ್ಲೂಕು

***

ಪಿಯುನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಓದುತ್ತಿರುವ ಟೂಶನ್‌ನ ಶುಲ್ಕ ಕಟ್ಟಲು ಹಾಗೂ ಪುಸ್ತಕಗಳನ್ನು ಕೊಂಡುಕೊಳ್ಳಲು ಸ್ಕಾಲರ್‌ಶಿಪ್‌ ಹಣ ಬಳಸಿಕೊಂಡೆ.

ಬಿ.ಎಲ್.ರಮ್ಯಾ, ಬೆಂಕಟವಳ್ಳಿ ಯಡಜಿಗಳಮನೆ, ಸಾಗರ ತಾಲ್ಲೂಕು

***

ಸ್ಕಾಲರ್‌ಶಿಪ್‌ನಲ್ಲಿ ಬಂದ ಹಣವನ್ನು ಕಾಲೇಜಿನ ಶುಲ್ಕ ಪಾವತಿಸಲು ಬಳಸಿಕೊಂಡೆ. ಇದರಿಂದ ಪಿಯು ಶಿಕ್ಷಣ ಮುಂದುವರಿಸಲು ಅನುಕೂಲವಾಯಿತು.

ಕೆ.ಆರ್.ಶಶಾಂಕ್

ಕಂಚಿಕೊಪ್ಪ, ಸಿರಿಗೆರೆ ಅಂಚೆ, ಶಿವಮೊಗ್ಗ ತಾಲ್ಲೂಕು.

***

ಮನೆಯಲ್ಲಿ ಆರ್ಥಿಕವಾಗಿ ತೊಂದರೆ ಇತ್ತು.  ವಿದ್ಯಾರ್ಥಿನಿಧಿಯಿಂದ ಬಂದ ಹಣ  ನನಗೆ ಕಾಲೇಜು ಶುಲ್ಕ ತುಂಬಲು   ನೆರವಾಯ್ತು.

ರೂಪಾ ಡಿ.ಡಿ. ಬಾಡಾ ಅಂಚೆ, ದಾವಣಗೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry