ಮುಂಚೂಣಿಯಲ್ಲಿ ರಾಜ್ಯ

7
ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಅಭಿಮತ

ಮುಂಚೂಣಿಯಲ್ಲಿ ರಾಜ್ಯ

Published:
Updated:
ಮುಂಚೂಣಿಯಲ್ಲಿ ರಾಜ್ಯ

ಮಂಡ್ಯ: ‘ರಾಜ್ಯದ ಶೇ 94ರಷ್ಟು ವರ್ತಕರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾಲಕ್ಕೆ ನೋಂದಣಿಯಾಗಿದ್ದು, ಹೊಸ ತೆರಿಗೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾ.ಬಿ.ವಿ.ಮುರಳೀಕೃಷ್ಣ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವ್ಯವಸ್ಥೆಯ ಜಾರಿಯಲ್ಲೂ ನಮ್ಮ ರಾಜ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿತ್ತು. ನಮ್ಮ ವರ್ತಕರು ಹಲವು ತಾಂತ್ರಿಕ ಸಮಸ್ಯೆಗಳ ನಡುವೆಯೂ ವ್ಯವಹಾರವನ್ನು ಜಿಎಸ್‌ಟಿ ಜಾಲಕ್ಕೆ ಬದಲಾಯಿಸಿಕೊಂಡಿದ್ದಾರೆ.

‘ಜಿಎಸ್‌ಟಿ ಬಗ್ಗೆ ವರ್ತಕರು ಆತಂಕ ಪಡುವ ಅಗತ್ಯ ಇಲ್ಲ. ಇದರಿಂದ ಯಾರಿಗೂ ನಷ್ಟವಾಗುವುದಿಲ್ಲ. ದೇಶ ಹೊಸ ಆರ್ಥಿಕ ವ್ಯವಸ್ಥೆಗೆ ತೆರೆದುಕೊಳ್ಳಲಿದೆ. ₹ 20 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುವ ಅಬಕಾರಿ, ಸೇವಾ ಮತ್ತು ವ್ಯಾಟ್ ಪಾವತಿದಾರರು ಜುಲೈ 1ರಿಂದ ಜಿಎಸ್‌ಟಿ ಜಾಲದಲ್ಲಿ ಖರೀದಿ ಮತ್ತು ಮಾರಾಟ ಚಟುವಟಿಕೆ ಆರಂಭಿಸಲಿದ್ದಾರೆ’ ಎಂದು ಹೇಳಿದರು.

**

ತವರು ರಾಜ್ಯಕ್ಕೆ ತೆರಿಗೆ ಪಾಲು

‘ದೇಶದ ಯಾವುದೇ ಭಾಗದಲ್ಲಿ ಗ್ರಾಹಕರು ಖರೀದಿ ಮಾಡಿದರೂ ತೆರಿಗೆಯ ಲಾಭ ಅವರ ತವರು ರಾಜ್ಯಕ್ಕೆ ಲಭಿಸುತ್ತದೆ.  ಮೊದಲು ಗ್ರಾಹಕ ಯಾವ ರಾಜ್ಯದಲ್ಲಿ ಖರೀದಿ ಮಾಡುತ್ತಿದ್ದನೋ ಆ ರಾಜ್ಯಕ್ಕೆ ಮಾತ್ರ ತೆರಿಗೆಯ ಲಾಭ ಸಿಗುತ್ತಿತ್ತು. ಈಗ ತೆರಿಗೆಯ ಪಾಲು ಹಂಚಿಕೆಯಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry