ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಲಾಂಛನ ಬ್ರಿಟಿಷ್ ಆಳ್ವಿಕೆಯ ಪ್ರತೀಕವಲ್ಲವೇ?

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಟಿಷ್ ಆಡಳಿತದ ಪ್ರತೀಕದಂತಿರುವ ಬಿಸಿಸಿಐ ಲಾಂಛನವನ್ನು ಭಾರತ ಕ್ರಿಕೆಟ್ ತಂಡ ಬಳಸುತ್ತಿರುವುದಕ್ಕೆ ಕೇಂದ್ರ ಮಾಹಿತಿ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯಿದೆ ಅಡಿ ಸೇರಿಸುವಂತೆಯೂ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಪ್ರಧಾನಿ ಕಚೇರಿ, ಕ್ರೀಡಾ ಇಲಾಖೆ ಮತ್ತು ಕಾನೂನು ಇಲಾಖೆಯನ್ನು  ಸಿಐಸಿ  ಆಯುಕ್ತ ಶ್ರೀಧರ್‌ ಆಚಾರ್ಯುಲು ಟೀಕಿಸಿದ್ದಾರೆ.

‘ಭಾರತ ಕ್ರಿಕೆಟ್ ತಂಡ ಬಳಸುತ್ತಿರುವ  ಸ್ಟಾರ್ ಆಫ್‌ ಇಂಡಿಯಾ  ಲಾಂಛನವನ್ನು ಬ್ರಿಟಿಷರು ತಮ್ಮ ನೆಚ್ಚಿನ ರಾಣಿಗೆ ಪ್ರೀತಿಯಿಂದ ಕೊಟ್ಟಿದ್ದರು. ಇದು 1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಪ್ರಸಂಗ. ಕ್ರಮೇಣ ಈ ರೀತಿ ಗೌರವ ನೀಡುವುದು ನಿಂತುಹೋಗಿತ್ತು. ಆದರೆ ಬಿಸಿಸಿಐ ಇನ್ನು ಕೂಡ ಆ ಲಾಂಛನವನ್ನು ತನ್ನಲ್ಲಿ ಇರಿಸಿಕೊಂಡಿದೆ. ಸರ್ಕಾರ ಇದನ್ನು ಗಮನಿಸಿ ದೇಶೀಯತೆಯನ್ನು ಬಿಂಬಿಸುವ ಲಾಂಛನ ಬಳಸಲು ಬಿಸಿಸಿಐಗೆ ಸೂಚಿಸಬೇಕಾಗಿತ್ತು. ಭಾರತದ ಧ್ವಜದಲ್ಲಿರುವ ಮೂರು ಬಣ್ಣಗಳನ್ನು ಬಳಸಿ ಅಥವಾ ಅಶೋಕ ಚಕ್ರವನ್ನು ಬಳಸಿ ಲಾಂಛನ ಸಿದ್ಧಪಡಿಸಬಹುದಿತ್ತು’ ಎಂದು ಆಚಾರ್ಯುಲು ಅಭಿಪ್ರಾಯಪಟ್ಟಿದ್ದಾರೆ. 

ಸುಭಾಷ್‌ ಅಗರವಾಲ್ ಎಂಬುವವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಆಯುಕ್ತರು ಈ  ಆದೇಶವನ್ನು ಹೊರಡಿಸಿದ್ದಾರೆ.

ಕ್ರಿಕೆಟ್‌ನಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ಗೆ ಸಂಬಂಧಿಸಿ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡುವಂತೆಯೂ ಆಯುಕ್ತರು ಸೂಚನೆ ನೀಡಿದ್ದಾರೆ. ‘ಕ್ರೀಡಾ ಕ್ಷೇತ್ರದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸರ್ಕಾರ ಯಾಕೆ ಮುಂದಾಗಲಿಲ್ಲ’ ಎಂದು ಕೂಡ ಅವರು ಪ್ರಶ್ನಿಸಿದ್ದಾರೆ.

‌‘ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆಲ್ಲುವವರನ್ನು ಏಕರೂಪದಲ್ಲಿ ಗೌರವಿಸಲು ಸರ್ಕಾರ ಯೋಜನೆ ಹಮ್ಮಿಕೊಳ್ಳಬೇಕು. ಇಲ್ಲದಿದ್ದರೆ ವಿವಿಧ ರಾಜ್ಯಗಳು ಕ್ರೀಡೆಯ ಹೆಸರಿನಲ್ಲಿ ಅನಗತ್ಯ ಪ್ರಚಾರ ಗಿಟ್ಟಿಸುವ ಗೀಳು ಬೆಳೆಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT