‘ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಕಣ್ಮರೆ’

7

‘ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಕಣ್ಮರೆ’

Published:
Updated:
‘ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಕಣ್ಮರೆ’

ಮಡಿಕೇರಿ: ‘ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಕಣ್ಮರೆಯಾಗಿದ್ದು, ಎಲ್ಲವನ್ನೂ ವ್ಯವಹಾರಿಕ ದೃಷ್ಟಿಕೋನದಲ್ಲಿ ನೋಡಲಾಗುತ್ತಿದೆ’ ಎಂದು ಹಿರಿಯ ವೈದ್ಯ ಎಂ.ಜಿ. ಪಾಟ್ಕರ್‌ ವಿಷಾದಿಸಿದರು.

ನಗರದಲ್ಲಿ ಭಾನುವಾರ ಬಿಜೆಪಿ ವೈದ್ಯಕೀಯ ಪ್ರಕೋಷ್ಠವು ಆಯೋ ಜಿಸಿದ್ದ ‘ಜನೌಷಧ’ ಅರಿವು ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ವೈದ್ಯಕೀಯ ಕ್ಷೇತ್ರವು ವೃತ್ತಿ ಅಲ್ಲ; ಅದೊಂದು ವ್ಯವಸ್ಥೆ. ಇಲ್ಲಿ ಉತ್ತಮ ಫಸಲು (ಹಣ ಗಳಿಕೆ) ತೆಗೆದುಕೊಳ್ಳ ಬಹುದು ಎಂಬ ನಂಬಿಕೆಗಿಂತಲೂ ಸೇವೆಯ ಮನೋಭಾವ ಮೂಡಬೇಕು. ಹಿರಿಯ ನಾಗರಿಕರನ್ನು ಸರ್ಕಾರವೇ ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಚಿಕಿತ್ಸೆ ಕೊಡುವುದಿಲ್ಲ; ಇಂತಹ ಧೋರಣೆ ಬದಲಾಗಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತ ನಾಡಿ, ‘ಮೊದಲು ಜನರ ಆರೋಗ್ಯ ಸುಧಾರಣೆ ಆಗಬೇಕು. ಬಡವರಿಗೆ ಕಡಿಮೆ ದರದಲ್ಲಿ ಔಷಧಗಳು ದೊರೆಯ ಬೇಕೆಂಬ ಉದ್ದೇಶದಿಂದ ಜನೌಷಧ ಮಳಿಗೆ ಆರಂಭಿಸಲಾಗುತ್ತಿದೆ’ ಎಂದರು.

‘ವೈದ್ಯ ಹಾಗೂ ವಕೀಲರಾಗಿರುವರು ಸೇವೆಗಾಗಿ ತಮ್ಮ ವೃತ್ತಿ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವರ ಸೇವೆಗಳು ತಲುಪಬೇಕು’ ಎಂದು ಪ್ರತಿಪಾದಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಭಾರತೀಶ್‌ ಮಾತನಾಡಿ, ‘ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಸುಧಾರಣೆ ಆಗಬೇಕು. ಕೇಂದ್ರ ಸರ್ಕಾರವು ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಹಾಕಿಕೊಂಡಿದೆ.

ಕೊಡಗು ಜಿಲ್ಲೆಯಲ್ಲಿ ರುವ ಖಾಸಗಿ ಆಸ್ಪತ್ರೆಗಳೂ ಸೇವೆಗೆ ಹೆಸರಾಗಿವೆ. ಅದೇ ಬೆಂಗಳೂರು, ಮಂಗಳೂರು ಆಸ್ಪತ್ರೆಗೆ ದಾಖಲಾದರೆ ನಮ್ಮ ಜೇಬು ಖಾಲಿ ಆಗುವುದರಲ್ಲಿ ಸಂದೇಹವಿಲ್ಲ; ಸೇವೆ ಮರೆಯಾಗಿ ಎಲ್ಲವನ್ನೂ ಹಣದಿಂದಲೇ ನೋಡಲಾ ಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, ‘ವೈದ್ಯಕೀಯ ಪ್ರಕೋಷ್ಠದಿಂದ ಉತ್ತಮ ಕೆಲಸಗಳು ನಡೆಯುತ್ತಿವೆ. ಕೊಡಗು ಜಿಲ್ಲಾ ಪ್ರಕೋಷ್ಠವು ರಾಜ್ಯದಲ್ಲಿ ಮಾದರಿ ಯಾಗಿದೆ’ ಎಂದು ಶ್ಲಾಘಿಸಿದರು. ಮುಖಂಡರಾದ ಮೇದಪ್ಪ, ಡಾ.ಬಿ.ಸಿ. ನವೀನ್‌, ಅನಂತಶಯನ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry