ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ: ಕೆ.ಶ್ರೀಕಾಂತ್ ಚಾಂಪಿಯನ್‌

7

ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ: ಕೆ.ಶ್ರೀಕಾಂತ್ ಚಾಂಪಿಯನ್‌

Published:
Updated:
ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ: ಕೆ.ಶ್ರೀಕಾಂತ್ ಚಾಂಪಿಯನ್‌

ಸಿಡ್ನಿ: ಅಮೋಘ ಲಯದಲ್ಲಿರುವ ಆಡುತ್ತಿರುವ ಭಾರತದ ಕೆ. ಶ್ರೀಕಾಂತ್‌ ಅವರು ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್ ಅವರು ಚೀನಾದ ಚೆನ್‌ ಲಾಂಗ್  ಅವರನ್ನು ಮಣಿಸುವ ಮೂಲಕ ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಕೀರಿಟವನ್ನು ಮುಡಿಗೇರಿಸಿಕೊಂಡರು.

ಪ್ರಬಲ ಪೈಪೋಟಿ  ನೀಡಿದ ಚೆನ್‌ ಲಾಂಗ್  ಅವರನ್ನು  22-20 ಮತ್ತು 21-16  ನೇರ ಸಟ್‌ನಲ್ಲಿ ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು.

5 ಲಕ್ಷ ಬಹುಮಾನ: ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ  ಗೆದ್ದ ಶ್ರೀಕಾಂತ್ ಅವರಿಗೆ ಬ್ಯಾಡ್ಮಿಂಟನ್ ಅಸೋಷಿಯೇಷನ್ ಆಫ್ ಇಂಡಿಯಾ ಸಂಸ್ಥೆ 5 ಲಕ್ಷ ನಗದು ಬಹುಮಾನ ಘೋಷಣೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry