ಸೋಮವಾರ, ಡಿಸೆಂಬರ್ 16, 2019
17 °C

ಅರ್ಜಿ ಸಲ್ಲಿಸಿಯೂ ಪ್ಯಾನ್‌ ಆಧಾರ್‌ ಜೋಡಣೆ ಮಾಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಅರ್ಜಿ ಸಲ್ಲಿಸಿಯೂ ಪ್ಯಾನ್‌ ಆಧಾರ್‌ ಜೋಡಣೆ ಮಾಡಿ

ನವದೆಹಲಿ: ಆನ್‌ಲೈನ್‌ ಮತ್ತು ಎಸ್‌ಎಂಎಸ್‌ ಮೂಲಕವಾಗಿ ಮಾತ್ರವಲ್ಲದೇ, ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ಮೂಲಕವೂ ಶಾಶ್ವತ ಖಾತೆ ಸಂಖ್ಯೆಗೆ (ಪ್ಯಾನ್‌) ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲು ಆದಾಯ ತೆರಿಗೆ ಇಲಾಖೆ ಅವಕಾಶ ಕಲ್ಪಿಸಿದೆ.

ಇದಕ್ಕಾಗಿ ಒಂದು ಪುಟದ ಅರ್ಜಿ ನಮೂನೆಯನ್ನು ಅದು ಸಿದ್ಧಪಡಿಸಿದೆ.

ಏನು ಮಾಡಬೇಕು?: ಜನರು ಅರ್ಜಿ ನಮೂನೆಯಲ್ಲಿ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆಗಳನ್ನು ಹಾಗೂ ಪ್ಯಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ಗಳಲ್ಲಿರುವ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.

ಅರ್ಜಿಯಲ್ಲಿ ನಮೂದಿಸಿರುವ ಆಧಾರ್‌ ಸಂಖ್ಯೆಯನ್ನು ಬೇರೆ ಯಾವುದೇ  ಪ್ಯಾನ್‌ನೊಂದಿಗೆ ಜೋಡಿಸುವುದಕ್ಕಾಗಿ ನೀಡಿಲ್ಲ ಮತ್ತು ಉಲ್ಲೇಖಿತ ಪ್ಯಾನ್‌ ಬಿಟ್ಟು ಬೇರೆ ಪ್ಯಾನ್‌ ಅನ್ನು ಹೊಂದಿಲ್ಲ ಎಂಬ ಘೋಷಣೆಗೆ ಅರ್ಜಿದಾರರು ಸಹಿ ಹಾಕಬೇಕು.

ಪ್ರತಿಕ್ರಿಯಿಸಿ (+)