ಶುಕ್ರವಾರ, ಡಿಸೆಂಬರ್ 13, 2019
17 °C

ಹರಾಜು ಪ್ರಕ್ರಿಯೆ ನಡೆಯದ ಸ್ತ್ರೀಶಕ್ತಿ ಭವನದ ಮಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಾಜು ಪ್ರಕ್ರಿಯೆ ನಡೆಯದ ಸ್ತ್ರೀಶಕ್ತಿ ಭವನದ ಮಳಿಗೆ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೆಸರಘಟ್ಟ ಸಮೀಪದ ಚಿಕ್ಕಬಾಣಾವರದಲ್ಲಿ  ನಿರ್ಮಿಸಿರುವ ಸ್ತ್ರೀಶಕ್ತಿ ಭವನದ ಮಳಿಗೆಗಳಿಗೆ 7 ವರ್ಷಗಳಿಂದ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿಲ್ಲ.

2010ರಲ್ಲಿ ₹7 ಲಕ್ಷ ವೆಚ್ಚದಲ್ಲಿ ಭವನವನ್ನು ನಿರ್ಮಿಸಲಾಗಿತ್ತು. ವಾಣಿಜ್ಯ ಉದ್ದೇಶಕ್ಕಾಗಿ ಎರಡು ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿತ್ತು.

‘ಪ್ರತಿ ವರ್ಷ ಈಗ ಇರುವ ಅಂಗಡಿ ಮಾಲೀಕರಿಗೇ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ’ ಎಂದು ಚಿಕ್ಕಬಾಣಾವರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.

‘ಸ್ತ್ರೀಶಕ್ತಿ ಒಕ್ಕೂಟವು ಭವನದ ನಿರ್ವಹಣೆಯ ಜವಾಬ್ದಾರಿಯನ್ನು ಸ್ತ್ರೀಶಕ್ತಿಯ ಒಂದು ಗುಂಪಿಗೆ ವಹಿಸಿಕೊಟ್ಟಿದೆ. ಇಲಾಖೆಯ ಉತ್ತರ ವಲಯದ ಅಧಿಕಾರಿ ಸಿದ್ದರಾಮಣ್ಣ ಅವರು ತಮಗೆ ಬೇಕಾದ ಸ್ತ್ರೀಶಕ್ತಿಯ ಗುಂಪಿಗೆ ಮಣೆ ಹಾಕಿದ್ದಾರೆ’ ಎಂದು ದಲಿತ ಮುಖಂಡ ಹನುಮಣ್ಣ ದೂರಿದರು.

‘ಈ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಬೇಕು. ಅದರ ಬಾಡಿಗೆಯನ್ನು ಹೆಚ್ಚಳ ಮಾಡಬೇಕು’ ಎಂದು ವ್ಯಾಪಾರಿ ರಮೇಶ್ ಆಚಾರ್ ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)