ಭಾನುವಾರ, ಡಿಸೆಂಬರ್ 8, 2019
21 °C

ಜಿಎಸ್‌ಟಿ: ಕೊಬ್ಬರಿ ಬೆಲೆ ಮೇಲೆ ಪರಿಣಾಮ ಇಲ್ಲ

Published:
Updated:
ಜಿಎಸ್‌ಟಿ: ಕೊಬ್ಬರಿ ಬೆಲೆ ಮೇಲೆ ಪರಿಣಾಮ ಇಲ್ಲ

ಹಾಸನ: ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಕೊಬ್ಬರಿ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.ಇದುವರೆಗೆ ಇದ್ದ ಶೇ 2ರಷ್ಟು ತೆರಿಗೆಯನ್ನು ಜಿಎಸ್‌ಟಿಯಲ್ಲಿ ಶೇ 5ಕ್ಕೆ ಹೆಚ್ಚಿಸಲಾಗಿದೆ. ಸದ್ಯ, ಕ್ವಿಂಟಲ್‌ ಕೊಬ್ಬರಿ ಬೆಲೆ ₹ 7,900. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಬಹುದು ಎಂದು ಹೇಳಲಾಗುತ್ತಿದೆ. 2ನೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂದು ಪ್ರಸಿದ್ಧಿಯಾಗಿರುವ ಅರಸೀಕೆರೆ ಎಪಿಎಂಸಿಯಲ್ಲಿ ದಿನಕ್ಕೆ 100 ಲಾರಿ ಲೋಡ್‌ ಕೊಬ್ಬರಿ ಮಾರಾಟವಾಗುತ್ತಿದೆ.‘ತೆರಿಗೆ ಹೆಚ್ಚಳ ಮಾಡಿರುವುದರಿಂದ ವರ್ತಕರು ಮತ್ತು ರೈತರಿಗೆ ನಷ್ಟ ಇಲ್ಲ. ಎಷ್ಟು ತೆರಿಗೆ ವಿಧಿಸುತ್ತಾರೋ ಅಷ್ಟನ್ನೂ ಗ್ರಾಹಕರ ಮೇಲೆಯೇ ಹಾಕುತ್ತೇವೆ. ಜಿಎಸ್‌ಟಿ ಗ್ರಾಹಕರಿಗೆ ಹೊರೆಯೇ ಹೊರತು ವರ್ತಕರಿಗೆ ಅಲ್ಲ. ಜಿಎಸ್‌ಟಿ ಜಾರಿ ಆಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಾಲು ಸಂಗ್ರಹಿಸುತ್ತಿಲ್ಲ.‘ಜಿಎಸ್‌ಟಿಯಿಂದ ಕೃಷಿ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಇದರಿಂದ ರೈತರಿಗೆ ಲಾಭ ಆಗುವುದಿಲ್ಲ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ನವೀನ್‌ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)