ಭಾನುವಾರ, ಡಿಸೆಂಬರ್ 8, 2019
21 °C

ಹೊತ್ತು ಮೂಡುವ ಮುನ್ನ ಲಭ್ಯ!

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಹೊತ್ತು ಮೂಡುವ ಮುನ್ನ ಲಭ್ಯ!

ಬಾಗಲಕೋಟೆ: ನಗರದಲ್ಲಿ ಹೊತ್ತು ಮೂಡುವ ಮುನ್ನವೇ ನಂದಿನಿ ಹಾಲಿನ ಪೊಟ್ಟಣಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮುಂದಾಗಿದೆ. ಅದಕ್ಕಾಗಿಯೇ ಇಲ್ಲಿನ ನವನಗರದಲ್ಲಿ ಅತ್ಯಾಧುನಿಕ ಹಾಲು ಸಂಸ್ಕರಣಾ ಕೇಂದ್ರ ಆರಂಭಿಸುತ್ತಿದೆ.‌

ನವನಗರದ ಕೈಗಾರಿಕಾ ಪ್ರದೇಶದ ಗ್ರೀನ್‌ಫುಡ್‌ ಪಾರ್ಕ್‌ನಲ್ಲಿ ಏಳು ಎಕರೆ ವ್ಯಾಪ್ತಿಯಲ್ಲಿ ₹ 22 ಕೋಟಿ ವೆಚ್ಚದಲ್ಲಿ ಘಟಕ ಸಿದ್ಧಗೊಳ್ಳುತ್ತಿದೆ. ಅಲ್ಲಿ 1 ಲಕ್ಷ ಲೀಟರ್ ಹಾಲು ಸಂಸ್ಕರಿಸಿ ಪ್ಯಾಕ್‌ ಮಾಡುವ ಜೊತೆಗೆ ಹಾಲಿನ ಉತ್ಪನ್ನ ಗಳನ್ನು ತಯಾರಿಸಲಾಗುತ್ತಿದೆ.

‘ಘಟಕದ ಸಿವಿಲ್‌ ಕಾಮಗಾರಿ ಶೇ 80ರಷ್ಟು ಮುಕ್ತಾಯವಾಗಿದೆ. ಡಿಸೆಂ ಬರ್ ವೇಳೆಗೆ ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ಕೂಡ ಪೂರ್ಣ ಗೊಳ್ಳಲಿದೆ. ಜನವರಿಯಿಂದ ಕಾರ್ಯಾರಂಭ ಮಾಡಲಿದೆ’ ಎಂದು ವಿಜಯ ಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯಪುರದಿಂದ ಪೂರೈಕೆ: ಬಾಗಲ ಕೋಟೆ ನಗರ ಹಾಗೂ ಜಿಲ್ಲೆಯ ಉಳಿದ ಭಾಗಕ್ಕೆ ಹೆಚ್ಚಿನ ಪಾಲು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿಜಯ ಪುರದ ಘಟಕದಿಂದಲೇ ಈಗ ಪೂರೈಕೆ ಮಾಡಲಾಗುತ್ತಿದೆ. ಒಂದಷ್ಟು ಪಾಲು ಮಾತ್ರ ಇಲ್ಲಿನ ವಿದ್ಯಾಗಿರಿಯ ಕೈಗಾರಿಕಾ ಪ್ರದೇಶದಲ್ಲಿ ಕೆಎಂಎಫ್‌ನ ಪುಟ್ಟ ಘಟಕದಿಂದ ಪೂರೈಕೆಯಾಗುತ್ತಿದೆ.

‘ವಿದ್ಯಾಗಿರಿ ಘಟಕದಲ್ಲಿ ನಿತ್ಯ ಕೇವಲ 20 ಸಾವಿರ ಲೀಟರ್ ಮಾತ್ರ ಹಾಲು ಸಂಸ್ಕರಣೆಯಾಗುತ್ತಿದೆ. ನಂದಿನಿಯ ಬೇರೆ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಪೇಡಾ, ತುಪ್ಪ, ಲಸ್ಸಿ, ಐಸ್‌ ಕ್ರೀಂ ವಿಜಯಪುರದಲ್ಲಿಯೇ ಸಿದ್ಧವಾಗುತ್ತಿದ್ದವು. ಹೊಸ ಘಟಕ ಆರಂಭದ ನಂತರ ಎಲ್ಲ ಉತ್ಪನ್ನಗಳನ್ನು ನವನಗರದಲ್ಲಿಯೇ ತಯಾರಿಸಲಾಗುತ್ತದೆ. ಹಾಗಾಗಿ ಗ್ರಾಹಕರಿಗೆ ಇನ್ನಷ್ಟು ತಾಜಾ ಉತ್ಪನ್ನ ಪೂರೈಸಲು ಸಾಧ್ಯ ವಾಗುತ್ತದೆ. ಜೊತೆಗೆ ಇನ್ನೂ ಕಡಿಮೆ ಕಾಲಾವಕಾಶ ದಲ್ಲಿ ಗ್ರಾಹಕರನ್ನು ತಲುಪಲು ನೆರವಾ ಗುತ್ತದೆ’ ಎನ್ನುತ್ತಾರೆ ಅಶೋಕ್‌.

ಹೊಸ ಘಟಕ ದೂಳು ನಿರೋಧಕ ವಾಗಿರಲಿದೆ. ಜೊತೆಗೆ ಹಾಲಿನ ಗುಣ ಮಟ್ಟ ಹೆಚ್ಚಳ, ಆರೋಗ್ಯಕರ ಪರಿಸರ, ವೇಗವಾಗಿ ಪ್ಯಾಕಿಂಗ್ ಮತ್ತು ಪೂರೈಕೆಗೆ ನೆರವಾಗಲಿದೆ.

ಹಾಲು ಉತ್ಪಾದನೆ ಹೆಚ್ಚಳ: ಹಾಲು ಒಕ್ಕೂಟದ ಬಾಗಲಕೋಟೆ ಜಿಲ್ಲೆ ವ್ಯಾಪ್ತಿ ಯಲ್ಲಿ ಈಗ ದಿನಕ್ಕೆ 1.30 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ.

ಅದರಲ್ಲಿ ಜಮಖಂಡಿ ವಿಭಾಗದ ಪಾಲು ಹೆಚ್ಚಾಗಿದೆ. ಬಾಗಲಕೋಟೆ ವಿಭಾಗದ ವ್ಯಾಪ್ತಿಗೆ ಹುನಗುಂದ,ಬಾದಾಮಿ, ಬೀಳಗಿ ಹಾಗೂ ಬಾಗಲಕೋಟೆ ತಾಲ್ಲೂ ಕುಗಳು ಒಳಪಡುತ್ತವೆ. ಇಲ್ಲಿ ಒಟ್ಟು 124 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಜಮ ಖಂಡಿ ಹಾಗೂ ಮುಧೋಳ ತಾಲ್ಲೂಕುಗಳನ್ನು ಒಳಗೊಂಡಿರುವ ಜಮಖಂಡಿ ವಿಭಾಗದಲ್ಲಿ 135 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯಾಚರಿಸುತ್ತಿವೆ. ‌

ಬಾಗಲಕೋಟೆಯ ಸಂಸ್ಕರಣಾ ಘಟಕ ದೊಡ್ಡದಾಗುವ ಕಾರಣ ಜಿಲ್ಲೆ ಯಲ್ಲಿ ಇನ್ನೂ 25ರಿಂದ 30 ಸಾವಿರ ಲೀಟರ್ ಹಾಲು ಉತ್ಪಾದನೆ ಹೆಚ್ಚಳಗೊಳಿಸುವ ಗುರಿ ಕೆಎಂಎಫ್‌ ಹೊಂದಿದೆ. ಹಾಗಾಗಿ ಇನ್ನೂ 100 ಸಂಘಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಆಶೋಕ್ ತಿಳಿಸಿದರು.

ನಂದಿನಿ ಪಾರ್ಲರ್ ಹೆಚ್ಚಳ

ಖಾಸಗಿ ಯವರ ಪೈಪೋಟಿ ಎದು ರಿಸಲು ಆರೋಗ್ಯಕರ ಹಾಲಿನ ಬಗ್ಗೆ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಕೆರೂರು, ಗದ್ದನಕೇರಿ ಕ್ರಾಸ್, ಲೋಕಾಪುರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪ್ರಮುಖ ಗ್ರಾಮಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರ ಗಳನ್ನು (ಪಾರ್ಲರ್‌) ಆರಂಭಿಸ ಲಾಗುವುದು ಎಂದರು.

ಪ್ರತಿಕ್ರಿಯಿಸಿ (+)