ಬುಧವಾರ, ಫೆಬ್ರವರಿ 19, 2020
24 °C

ಬಣಕಲ್‌: ಸಮಗ್ರ ಕೃಷಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಣಕಲ್‌: ಸಮಗ್ರ ಕೃಷಿ ಅಭಿಯಾನ

ಮೂಡಿಗೆರೆ: ವೈಜ್ಞಾನಿಕವಾಗಿ ಕೃಷಿ ನಡೆ ಸುವುದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಕುಮುದಾ ಅಭಿಪ್ರಾಯಪಟ್ಟರು. ತಾಲ್ಲೂಕಿನ ಬಣಕಲ್‌ನಲ್ಲಿ ಬುಧ ವಾರ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ರೈತರು ಮಣ್ಣು ಹಾಗೂ ಹವಾ ಮಾನಕ್ಕೆ ಸೂಕ್ತವಾದ ಕೃಷಿಯನ್ನು ಕೈಗೊ ಳ್ಳುವುದರಿಂದ ಉತ್ತಮ ಬೆಳೆ ತೆಗೆಯ ಬಹುದು. ಕೃಷಿಯ ಎಲ್ಲ ಕಾರ್ಯಗಳಲ್ಲೂ ಆಧುನಿಕತೆಯನ್ನು ಅಳವಡಿಸಿಕೊಂಡು, ಯಂತ್ರೋಪಕರಣಗಳನ್ನು ಬಳಸಿ ಕೃಷಿ ನಡೆಸುವುದರಿಂದ ಕಡಿಮೆ ಖರ್ಚಿನಲ್ಲಿ ಕೃಷಿ ನಡೆಸಿ ಹೆಚ್ಚು ಬೆಳೆ ಪಡೆದು ಲಾಭಗಳಿಸಲು ಸಾಧ್ಯವಾಗುತ್ತದೆ.

ಪ್ರತಿಯೊಬ್ಬ ರೈತರು ಕೃಷಿ ಇಲಾಖೆ, ಕೃಷಿ ವಿಜ್ಞಾನಿಗ ಳೊಂದಿಗೆ ಸಂಪರ್ಕ ಪಡೆದು, ಕೃಷಿ ಪ್ರಾರಂಭಿಸುವ ಮುನ್ನ ತಜ್ಞರೊಂದಿಗೆ ಸಮಾಲೋಚಿಸಿ, ಕೃಷಿ ನಡೆಸಿದರೆ ಉತ್ತ ಮ ಬೆಳೆ ಪಡೆಯಬಹುದು. ಈ ನಿಟ್ಟಿನಲ್ಲಿ ರೈತರಿಗೆ ಮಾಹಿತಿ ಒದಗಿಸಲು ಪ್ರತಿ ಹೋ ಬಳಿಯ ಎಲ್ಲ ಗ್ರಾಮಗಳಿಗೂ ಸಮಗ್ರ ಕೃಷಿ ಅಭಿಯಾನ ರಥ ಸಾಗಿ ಜಾಗೃತಿ ಮೂಡಿ ಸಲಾಗುತ್ತಿದೆ ಎಂದರು.

ಕೃಷಿಕ ಸಮಾಜದ ಕಾರ್ಯದರ್ಶಿ ಪಿ.ಕೆ. ನಾಗೇಶ್‌ ಮಾತನಾಡಿ, ‘ಕೃಷಿಯಲ್ಲಿ ರೈತರು ಪರಸ್ಪರ ಮಾಹಿತಿಯನ್ನು ವಿನಿಮ ಯ ಮಾಡಿಕೊಳ್ಳಬೇಕು. ಎಲ್ಲ ರೈತರು ಒಂದೇ ಬೆಳೆ ಬೆಳೆಯುವುದರಿಂದ ಬೆಲೆ ಯಿಲ್ಲದೇ ನಷ್ಟ ಅನುಭವಿಸುವ ಅಪಾಯವಿರುವುದರಿಂದ ಬೇರೆ ಬೇರೆ ಬೆಳೆಗಳನ್ನು ಬೆಳೆದು ಲಾಭಗಳಿಸಬೇಕು. ಮಲೆನಾಡಿ ನಲ್ಲಿ ಭತ್ತದ ಬೆಳೆಯನ್ನು ಉಳಿಸಲು ಸರ್ಕಾರವು  ರೈತರಿಗೆ ಎಕರೆಗೆ ಕನಿಷ್ಟ ₹10 ಸಾವಿರ ಸಹಾಯಧನ ನೀಡಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ವೀಣಾಉಮೇಶ್‌, ಮಾಜಿ ಸದಸ್ಯ ಸಬ್ಲಿ ದೇವರಾಜ್‌, ಗ್ರಾಮ ಪಂಚಾಯಿತಿ ಅಧ್ಯ ಕ್ಷ ಸುರೇಶ್‌, ಉಪಾಧ್ಯಕ್ಷೆ ಲಕ್ಷ್ಮಿ, ಪಿಡಿಒ ಚಂದ್ರಾವತಿ, ಕೃಷಿ ಅಧಿಕಾರಿ ಪುಟ್ಟಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)