ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರ ಹೊತ್ತಿಗೆ ಶೇ 50ರಷ್ಟು ಮೊಬೈಲ್‌ ಖರೀದಿದಾರರು ಭಾರತ, ಚೀನಾದಲ್ಲಿ

Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ದುಬೈ: 2020ರ ಹೊತ್ತಿಗೆ ಜಗತ್ತಿನ ಹೊಸ ಮೊಬೈಲ್‌ ಖರೀದಿದಾರರಲ್ಲಿ ಭಾರತ ಮತ್ತು ಚೀನಾದ ಗ್ರಾಹಕರೇ ಶೇ 50ರಷ್ಟಿರುತ್ತಾರೆ  ಎಂದು  ಅಧ್ಯಯನವೊಂದು ತಿಳಿಸಿದೆ.

‘ಮೊಬೈಲ್ ವರ್ಲ್ಡ್ ಕಾಂಗ್ರೆಸ್  ಶಾಂಘೈ’ನಲ್ಲಿ ಪ್ರಕಟಿಸಿರುವ  2017ರ ‘ಮೊಬೈಲ್‌ ಎಕಾನಮಿ: ಏಷ್ಯಾ ಪೆಸಿಫಿಕ್‌’ ವರದಿ ಪ್ರಕಾರ, ಈ ದಶಕದ ಅಂತ್ಯಕ್ಕೆ ಭಾರತದ ಶೇ 27 ಮತ್ತು ಚೀನಾದ ಶೇ 21ರಷ್ಟು ಮೊಬೈಲ್‌ ಗ್ರಾಹಕರಿರುತ್ತಾರೆ.

2016ರ ಅಂತ್ಯಕ್ಕೆ ಏಷ್ಯಾ ಪೆಸಿಫಿಕ್‌ ವಲಯದಲ್ಲಿ 270 ಕೋಟಿ ಇದ್ದ ಮೊಬೈಲ್‌ ಗ್ರಾಹಕರ ಸಂಖ್ಯೆ 2020ರಲ್ಲಿ 310 ಕೋಟಿಗೆ ಏರಲಿದೆ. ಈ ಅವಧಿಯಲ್ಲಿ ಸಾಮಾಜಿಕ ಅಭಿವೃದ್ಧಿ ಮತ್ತು ಏಷ್ಯಾ ಅರ್ಥವ್ಯವಸ್ಥೆಗೆ  ಮೊಬೈಲ್‌ ಉದ್ಯಮ ಹೇಗೆ ಕೊಡುಗೆ ನೀಡುತ್ತದೆ ಎಂಬ ಬಗ್ಗೆಯೂ ವರದಿ ಗಮನಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT