ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದುಗೊಂಡ ಹಳೆಯ ನೋಟುಗಳ ಜಮೆಗೆ ಜನರಿಗೆ ಮತ್ತೊಂದು ಅವಕಾಶ ಸಿಗುವುದೇ; ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

Last Updated 4 ಜುಲೈ 2017, 7:18 IST
ಅಕ್ಷರ ಗಾತ್ರ

ನವದೆಹಲಿ: ಅಪಮೌಲ್ಯೀಕರಿಸಲಾದ ಹಳೆಯ ನೋಟುಗಳನ್ನು ಜಮೆ ಮಾಡಲು ಸಾರ್ವಜನಿಕರಿಗೆ ಮತ್ತೊಂದು ಅವಕಾಶ ಸಿಗುವುದೇ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಜನರಿಗೆ ಹಳೆಯ ನೋಟು ಜಮೆಗೆ ಮತ್ತೊಂದು ಅವಕಾಶ ಸಿಗಲಿದೆಯೇ ಎನ್ನುವ ಕುರಿತು ಎರಡು ವಾರದೊಳಗೆ ಉತ್ತರಿಸುವಂತೆ ಮುಖ್ಯನ್ಯಾಯಮೂರ್ತಿ ಜೆ.ಎಸ್‌.ಖೆಹರ್‌ ಹಾಗೂ ನ್ಯಾ.ಡಿ.ವೈ.ಚಂದ್ರಚೂಡ್‌ ಅವರನ್ನು ಒಳಗೊಂಡ ನ್ಯಾಯಪೀಠ  ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

ಮತ್ತೊಂದು ಅವಕಾಶ ನೀಡುವುದನ್ನು ಪರಿಗಣಿಸುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಸಮ್ಮತಿಸಿತ್ತು.

'ಕಷ್ಟಪಟ್ಟು ಪ್ರಾಮಾಣಿಕವಾಗಿ ಸಂಪಾದಿಸಿರುವ ಜನರ ಹಣವನ್ನು ನೀವು ಈ ರೀತಿ ನಿರುಪಯುಕ್ತಗೊಳಿಸುವಂತಿಲ್ಲ...ನಿಜಕ್ಕೂ ಸಂಕಷ್ಟದಲ್ಲಿರುವ ಜನರಿಗೆ ಹಳೆಯ ನೋಟು ಬದಲಾವಣೆಗೆ ಮತ್ತೊಂದು ಅವಕಾಶ ಒದಗಿಸುವುದಾಗಿ ಭರವಸೆ ನೀಡಿದ್ದಿರಿ. ನೀವೀಗ ಹಿಂದೆ ಸರಿಯುವಂತಿಲ್ಲ’ ಎಂದು ಕೋರ್ಟ್‌ ಸರ್ಕಾರವನ್ನು ಎಚ್ಚರಿಸುವ ಮಾತನ್ನಾಡಿದೆ.

ನವೆಂಬರ್‌ 8ರಂದು ₹500, ₹1000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಅಪಮೌಲ್ಯೀಕರಿಸಿತ್ತು. ಹಳೆಯ ನೋಟುಗಳನ್ನು ಜಮೆ ಮಾಡಲು ಡಿ.31ರ ವರೆಗೂ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು.

ಆದರೆ, ಪ್ರಾಮಾಣಿಕವಾಗಿ ಗಳಿಸಿರುವ ಹಣದ ಕುರಿತು ಪ್ರಮಾಣೀಕರಿಸಿದವರು ಡಿ.31ರೊಳಗೆ ನೋಟು ಬದಲಾವಣೆ ಮಾಡಲು ಸಾಧ್ಯವಾಗದಿದ್ದರೆ ಮತ್ತೊಂದು ಅವಕಾಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT