ಸೋಮವಾರ, ಡಿಸೆಂಬರ್ 16, 2019
18 °C

ವಿಮಾ ಕ್ಷೇತ್ರಕ್ಕೆ ತಂತ್ರಜ್ಞಾನ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾ ಕ್ಷೇತ್ರಕ್ಕೆ ತಂತ್ರಜ್ಞಾನ ಸ್ಪರ್ಶ

ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿ ಕೊಂಡರೆ ಯಾವುದೇ ಕ್ಷೇತ್ರದ ಗ್ರಾಹಕರನ್ನು ಪರಿಣಾಮಕಾರಿಯಾಗಿ ತಲುಪಬಹುದು. ಅದೇ ರೀತಿ ವಿಮಾ ಕ್ಷೇತ್ರವನ್ನೂ ಡಿಜಿಟಲೀಕರಣ ಮಾಡಿ ಸಾರ್ವಜನಿಕರಿಗೆ ಆರ್ಥಿಕ ಅನುಕೂಲ ಒದಗಿಸುವ ಪಾಲಿಸಿಗಳನ್ನು ಯಶಸ್ವಿಯಾಗಿ ಗ್ರಾಹಕರಿಗೆ ತಲುಪಿಸಬಹುದು.

ಇದಕ್ಕೆ ಮೊದಲು ಮಾಡಬೇಕಾದ ಕೆಲಸವ ಏನೆಂದರೆ, ವಿಮಾ ಸೌಲಭ್ಯಗಳ ಕುರಿತು ಸುಲಭವಾಗಿ ಅರ್ಥವಾಗುವಂತೆ ಮತ್ತು ಗ್ರಾಹಕರನ್ನು ಆಕರ್ಷಿಸುವಂತೆ ಅಂತರ್ಜಾಲದಲ್ಲಿ ವಿವರಿಸುವ ಕೆಲಸವನ್ನು ಮಾಡಬೇಕು. ಅಲ್ಲದೆ, ಗ್ರಾಹಕರು ಹುಡುಕಲು ಸುಲಭವಾಗುವಂತೆ ಸಂಸ್ಥೆಗಳ ಅಂತರ್ಜಾಲ ತಾಣಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು.

ವಿಮಾ ಪಾಲಿಸಿಯ ವೈಶಿಷ್ಟ್ಯ ಮತ್ತು ಸೌಲಭ್ಯಗಳ ಬಗ್ಗೆ ವಿಮೆ ಮಾಡಿಸಿಕೊಳ್ಳುವವರಿಗೆ ಸರಿಯಾದ ಮಾಹಿತಿ ಒದಗಿಸಬೇಕು.

ಎರಡನೆಯದಾಗಿ ತಂತ್ರಜ್ಞಾನ ನೆರವು ಪಡೆಯುವುದರಿಂದ ಸಂಸ್ಥೆಯ ಪಾಲಿಸಿಗಳ ಮಾರಾಟ ಮತ್ತು ಆಡಳಿತ ದಲ್ಲಿ ಸ್ವಯಂಚಾಲಿತ ವ್ಯವಸ್ಥೆಯನ್ನು ಜಾರಿಗೆ ತರಬಹುದು.

ಗ್ರಾಹಕರು ಒದಗಿಸುವ ದಾಖಲೆಗಳ ಆಧಾರದ ಮೇಲೆಯೇ ವಿಮಾ ಸಂಸ್ಥೆಗಳು ಭರವಸೆ ಇಟ್ಟು ವ್ಯವಹಾರ ನಡೆಸುತ್ತವೆ. ಗ್ರಾಹಕನ ಆಧಾರ್‌ ಕಾರ್ಡ್‌ನಂತಹ ದಾಖಲೆಗಳು ತಂತ್ರಜ್ಞಾನ ಅಳವಡಿಸಿಕೊಳ್ಳಲು ಹೆಚ್ಚು ನೆರವಾಗುತ್ತವೆ.

ಒಟ್ಟಿನಲ್ಲಿ ತಂತ್ರಜ್ಞಾನವನ್ನು ಒಬ್ಬ ಉದ್ಯೋಗಿಯಂತೆ ಬಳಸಿಕೊಂಡು ಕೆಲಸ ಸುಗಮ ಮಾಡಿಕೊಳ್ಳಬಹುದು. ಆದರೆ, ಪಾಲಿಸಿಗಳನ್ನು ಮಾಡಿಸಲು ಪಾಲಿಸಿ ಮಾಡಿಸುವ ದಲ್ಲಾಳಿಗಳಿಗೆ ತಂತ್ರಜ್ಞಾನ ಎಷ್ಟರ ಮಟ್ಟಿಗೆ ನೆರವಾಗಬಹುದು ಎಂಬ ಪ್ರಶ್ನೆಯೂ ಎದುರಾಗುತ್ತದೆ. ಇದು ಅಂತಹ ದೊಡ್ಡ ಸಮಸ್ಯೆ ಅಲ್ಲ. ಪಾಲಿಸಿಯ ವಿವರ, ಅಗತ್ಯವಾದ ದಾಖಲೆ ಇತ್ಯಾದಿ ಮಾಹಿತಿಯನ್ನು ಮೊಬೈಲ್‌ಫೋನ್‌ಗಳಲ್ಲಿ ಅಳವಡಿಸಿದರೆ ಕೆಲಸ ಇನ್ನಷ್ಟು ಸುಲಭವಾಗುತ್ತದೆ.

ಈ ಕ್ಷೇತ್ರದಲ್ಲಿ ಇದುವರೆಗೆ ಕೆವೈಸಿ, ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲೆ ಪತ್ರಗಳನ್ನು ಇಟ್ಟುಕೊಂಡು ವ್ಯವಹಾರ ನಡೆಸಲಾಗುತ್ತದೆ. ತಂತ್ರಜ್ಞಾನದ ನೆರವು ಸಿಕ್ಕರೆ, ದಾಖಲೆಗಳನ್ನು ಚಿತ್ರದ ರೂಪದಲ್ಲಿ ಸುಲಭವಾಗಿ ಸಂಗ್ರಹಿಸಬಹುದು.

ಈ ರೀತಿ ವಿಮೆ ಕ್ಷೇತ್ರವನ್ನೂ ಡಿಜಟಲೀಕರಣ ಮಾಡುವುದರಿಂದ ಗ್ರಾಹಕರ ಜತೆ ಸಂಸ್ಥೆಗಳು ನಡೆಸುವ ವ್ಯವಹಾರದ ಮಾಹಿತಿಯನ್ನೂ ಸಂಗ್ರಹಿಸಿ ಇಟ್ಟುಕೊಳ್ಳುವುದೂ ಸುಲಭವಾಗುತ್ತದೆ. ಈ ದಾಖಲೆ ಅಥವಾ ಮಾಹಿತಿ ಮುಂದಿನ ವ್ಯವಹಾರಗಳಿಗೂ ನೆರವಾಗುತ್ತದೆ. ಅಲ್ಲದೆ ಗ್ರಾಹಕರ ವ್ಯಕ್ತಿತ್ವ, ವ್ಯವಹಾರ ಕ್ರಮ ಇತ್ಯಾದಿ ವೈಯಕ್ತಿಕ ವಿವರಗಳೂ ಸಿಗುತ್ತವೆ.

ಒಟ್ಟಿನಲ್ಲಿ ತಂತ್ರಜ್ಞಾನದ ನೆರವನ್ನು ಸಮರ್ಪಕವಾಗಿ ಪಡೆದುಕೊಂಡರೆ ವಿಮೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಸಾಧಿಸಬಹುದು. ಅಲ್ಲದೆ, ವ್ಯವಹಾರವೂ ಬೇಗ ನಡೆಯುತ್ತದೆ.

-ಸುರೇಶ್‌ ಅಗರ್ವಾಲ್‌ (ಕೋಟಕ್ ಲೈಫ್‌ ಇನ್ಸೂರೆನ್ಸ್‌ ಮುಖ್ಯ ವಿತರಣಾ ಆಧಿಕಾರಿ)

ಪ್ರತಿಕ್ರಿಯಿಸಿ (+)