ಮಂಗಳವಾರ, ಡಿಸೆಂಬರ್ 10, 2019
16 °C

ಹಳಸಿತೇ ಬಾಲಿವುಡ್ ಮಸಾಲೆ

Published:
Updated:
ಹಳಸಿತೇ ಬಾಲಿವುಡ್ ಮಸಾಲೆ

ಸಿದ್ಧ ಮಸಾಲೆ ಸೂತ್ರಗಳನ್ನು ಜನರಿಗೆ ಅಭ್ಯಾಸ ಮಾಡಿಸಿ, ಹಿಟ್‌ ಮೇಲೆ ಹಿಟ್ ಕೊಡುತ್ತಿದ್ದ ಬಾಲಿವುಡ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕಳೆಗುಂದುತ್ತಿರುವುದು ಇದೀಗ ದೇಶವ್ಯಾಪಿ ಚರ್ಚೆಯ ವಿಷಯ. ‘ದಂಗಲ್‌’ ಹೊರತುಪಡಿಸಿದರೆ ಕಳೆದ ಜನವರಿಯಿಂದ ಇಲ್ಲಿಯವರೆಗೆ ಒಂದೂ ಹಿಂದಿ ಚಿತ್ರ 150 ಕೋಟಿ ರೂಪಾಯಿ ಗಡಿ ದಾಟಲಿಲ್ಲ. ಶಾರುಕ್‌ಖಾನ್, ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌ ಚಿತ್ರಗಳೂ ಜನರಿಗೆ ರುಚಿಸುತ್ತಿಲ್ಲ.

ಆದರೆ, ಇದೇ ಹೊತ್ತಿನಲ್ಲಿ ದಕ್ಷಿಣ ಭಾರತದ ಚಿತ್ರಗಳ ಸಾಧನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ’ಬಾಹುಬಲಿ’ ವರ್ಷದ ದೊಡ್ಡ ಚಿತ್ರವಾಗಿದ್ದರೆ ಅಲ್ಲು ಅರ್ಜುನ್– ಪೂಜಾ ಹೆಗ್ಡೆ ಜೋಡಿಯ ‘ದುವ್ವಾಡ ಜಗನ್ನಾಥಂ’ ಚಿತ್ರದ ಕಲೆಕ್ಷನ್ ‘ಟ್ಯೂಬ್‌ಲೈಟ್’ ಚಿತ್ರವನ್ನು ಸರಿಗಟ್ಟಿದೆ.

ಪ್ರತಿಕ್ರಿಯಿಸಿ (+)