ಶನಿವಾರ, ಡಿಸೆಂಬರ್ 7, 2019
16 °C

ಇಸ್ರೇಲ್‌ ಪ್ರಧಾನಿಗೆ ಕೇರಳದ ಪ್ರಾಚೀನ ಅವಶೇಷಗಳ ಪ್ರತಿಕೃತಿ ಉಡುಗೊರೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಇಸ್ರೇಲ್‌ ಪ್ರಧಾನಿಗೆ ಕೇರಳದ ಪ್ರಾಚೀನ ಅವಶೇಷಗಳ ಪ್ರತಿಕೃತಿ ಉಡುಗೊರೆ

ಜೆರುಸಲೆಮ್‌: ಭಾರತದಲ್ಲಿ ಯೆಹೂದಿಗಳ ಇತಿಹಾಸವನ್ನು ಸಾರುವ  ಪ್ರಾಚೀನ ಅವಶೇಷಗಳ ಪ್ರತಿಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾತ್ರಿ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಕ್ರಿ.ಶ.9–10ನೇ ಶತಮಾನದಲ್ಲಿ ತಾಮ್ರದ ತಟ್ಟೆಗಳ ಮೇಲೆ ಕೆತ್ತಲಾಗಿರುವ ಶಾಸನಗಳನ್ನು ಒಳಗೊಂಡಿರುವ ಉಡುಗೊರೆ ಇದಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಟ್ವಿಟರ್‌ನಲ್ಲಿ ಪ್ರಕಟಿಸಿದೆ.

ಹಿಂದು ರಾಜ ಚೆರಮನ್‌ ಪೆರುಮಾಳ್‌(ಭಾಸ್ಕರ ರವಿ ವರ್ಮಾ) ಅವರು ಯೆಹೂದಿ ಮುಖಂಡ ಜೋಸೆಫ್‌ ರಬ್ಬನ್‌ರಿಗೆ ನೀಡಲಾದ ರಾಜಯೋಗ್ಯ ಸವಲತ್ತು ಹಾಗೂ ವಿಶೇಷ ಹಕ್ಕುಗಳ ಕುರಿತಾದ ಬರಹಗಳು ಇದರಲ್ಲಿವೆ. ಕೊಚ್ಚಿನ್‌ನಲ್ಲಿ ವಾಸಿಸುತ್ತಿದ್ದ ಯೆಹೂದಿಗಳಿಗೆ ಅನೇಕ ಸವಲತ್ತುಗಳನ್ನು ನೀಡಲಾಗಿತ್ತು.

ದಕ್ಷಿಣ ಭಾರತೀಯ ವಿನ್ಯಾಸ ಹೊಂದಿರುವ ಚಿನ್ನಲೇಪಿತ ಲೋಹದ ಮುಕುಟ ಹಾಗೂ ಕೇರಳದ ಪ್ರದೇಶಿ ಯೆಹೂದಿ ಸಮುದಾಯ ನೀಡಿದ್ದ ತೊರಾ(ಯೆಹೂದಿ ಉಪದೇಶ ಒಳಗೊಂಡ) ಶಾಸನ ಪ್ರತಿಗಳನ್ನು ಇಸ್ರೇಲ್‌ ಪ್ರಧಾನಿಗೆ ನೀಡಲಾಗಿದೆ.

ಪ್ರತಿಕ್ರಿಯಿಸಿ (+)