ಶನಿವಾರ, ಡಿಸೆಂಬರ್ 7, 2019
16 °C

ಹೂವಿಗೆ ಮೋದಿಯವರ ಹೆಸರಿಟ್ಟ ಇಸ್ರೇಲ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೂವಿಗೆ ಮೋದಿಯವರ ಹೆಸರಿಟ್ಟ ಇಸ್ರೇಲ್

ಟೆಲ್ ಅವೀವ್: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸ್ಮರಣಾರ್ಥಕಾಗಿ ಇಸ್ರೇಲ್‍ನ ಹೂವೊಂದಕ್ಕೆ 'ಮೋದಿ' ಎಂದು ಹೆಸರಿಡಲಾಗಿದೆ. ಮೊದಲ ಬಾರಿ ಇಸ್ರೇಲ್‍ಗೆ ಭೇಟಿ ನೀಡಿದ ಮೋದಿ ಅಲ್ಲಿನ ಡಾಂಜಿಗರ್ ಪುಷ್ಪ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಪುಷ್ಪೋದ್ಯಮದ ಆವಿಷ್ಕಾರ ಮತ್ತು ಅಭಿವೃದ್ಧಿ ಮಾದರಿಗಳನ್ನು ವೀಕ್ಷಿಸಿದ್ದಾರೆ.

ಇಸ್ರೇಲ್‍ನೊಂದಿಗೆ ಭಾರತದ ಸಂಬಂಧದ ದ್ಯೋತಕವಾಗಿ ಅಲ್ಲಿನ ಕ್ರಿಸಾಂತುಮಮ್ (ಅತೀ ಬೇಗನೆ ಬೆಳೆಯುವ ಬಣ್ಣದ ಹೂ ಗಿಡ) ಎಂಬ ಹೂವಿಗೆ ಮೋದಿ ಎಂದು ಹೆಸರಿಟ್ಟಿರುವುದಾಗಿ ಟೆಲ್ ಅವೀವ್ ಅಧಿಕೃತರು ಹೇಳಿದ್ದಾರೆ.

ಬೇಗನೆ ಬೆಳೆದು ಬಿಡುವ ಇಸ್ರೇಲಿನ ಕ್ರಿಸಾಂತುಮಮ್ ಹೂವಿಗೆ ಪ್ರಧಾನಿ ನರೇಂದ್ರ ಮೋದಿ ಗೌರವಾರ್ಥ ಮೋದಿ ಎಂದು ಹೆಸರಿಡಲಾಗಿದೆ. ನಮ್ಮ ಬಾಂಧವ್ಯ ಬೆಳೆಯುತ್ತಿದೆ ಎಂದು ಇಸ್ರೇಲ್ ಸರ್ಕಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಇಸ್ರೇಲ್‍ನ ಡಾಂಜಿಗರ್ ಪುಷ್ಪ ಕೃಷಿ ಕ್ಷೇತ್ರವು ಅಂದಾಜು 80,000 ಚದರ ಮೀಟರ್‍‍ಗಳಷ್ಟು ಸ್ಥಳದಲ್ಲಿ ಹಸಿರು ಮನೆ ನಿರ್ಮಿಸಿ ಸಸ್ಯಗಳನ್ನು ಪೋಷಿಸಿ ಬೆಳೆಸುತ್ತಿದೆ. 1953ರಲ್ಲಿ ಸ್ಥಾಪಿಸಲ್ಪಟ್ಟ ಈ ಕೃಷಿ ಕ್ಷೇತ್ರವು ಜೆರುಸಲೇಂನಿಂದ 56 ಕಿಮಿ ದೂರದಲ್ಲಿದೆ.

ಪ್ರತಿಕ್ರಿಯಿಸಿ (+)