ಬುಧವಾರ, ಡಿಸೆಂಬರ್ 11, 2019
19 °C

ಹೊಸ ವಿನ್ಯಾಸ

Published:
Updated:
ಹೊಸ ವಿನ್ಯಾಸ

ಹೊಸ ವಿನ್ಯಾಸ

ಆಭರಣ ಮಾರಾಟ ಮಳಿಗೆ ತನಿಷ್ಕ್ ಹೊಸ ವಿನ್ಯಾಸದ ’ಮಿರಾಯಾ’ ಚಿನ್ನದ ಆಭರಣವನ್ನು ಪರಿಚಯಿಸಿದೆ. ಬಣ್ಣದ ಹರಳುಗಳುಳ್ಳ ಈ ಆಭರಣ ಆಧುನಿಕ ವಿನ್ಯಾಸದಲ್ಲಿ ಲಭ್ಯವಿದೆ. ಪ್ರಸ್ತುತ 100 ಮಿರಾಯಾ ಆಭರಣಗಳಷ್ಟೆ ಮಾರಾಟಕ್ಕೆ ಲಭ್ಯವಿದೆ ಎಂದು ತನಿಷ್ಕ್ ಹೇಳಿದೆ.

**

ದಾಳಿಂಬೆ ಜ್ಯೂಸ್

ಐಟಿಸಿ ಕಂಪೆನಿಯು ದಾಳಿಂಬೆ ಹಣ್ಣಿನಿಂದ ಮಾಡಿದ ಬಿ–ನ್ಯಾಚುರಲ್ ದಾಳಿಂಬೆ ಹಣ್ಣಿನ ರಸವನ್ನು ಬಿಡುಗಡೆ ಮಾಡಿದೆ. ಯಾವುದೇ ಪ್ರಿಸರ್ವೇಟಿವ್ ಅಥವಾ ಫ್ಲೇವರ್‌ಗಳನ್ನು ಸೇರಿಸಿಲ್ಲ ಎನ್ನುವುದು ಕಂಪೆನಿಯ ಭರವಸೆ. ಒಂದು ಲೀಟರ್ ಬಾಟಲಿಗೆ  ₹199.

**

ರೆಡಿಮೇಡ್ ಉಡುಪು

ಶಾಪ್‌ಕ್ಲೂಸ್ ಉಡುಪು ಮಾರಾಟ ಮಳಿಗೆ ಹಾಫ್‌ಶೋಲ್ಡರ್, ಲಾರ್ಜ್‌ ಬೆಲ್ ಸ್ಲೀವ್ಸ್, ಫುಲ್‌ಲೆಂತ್‌ ಸ್ಲೀವ್ಸ್‌, ಸ್ರಕ್ಚರ್ಡ್‌ ಸ್ಲೀವ್‌ ಮಾದರಿಯ ಹೊಸ ಉಡುಪುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪುರುಷ ಮತ್ತು ಸ್ತ್ರೀಯರು ಧರಿಸಬಹುದಾದ ಉಡುಪುಗಳ ಹೊಸ ಕಲೆಕ್ಷನ್ ಇದಾಗಿದ್ದು. ಕಚೇರಿ, ಪಾರ್ಟಿ ಎಲ್ಲ ಕಡೆಯೂ ಒಪ್ಪುತ್ತವೆ ಎಂದು ಕಂಪೆನಿ ಹೇಳಿದೆ.

ಪ್ರತಿಕ್ರಿಯಿಸಿ (+)