ಶನಿವಾರ, ಡಿಸೆಂಬರ್ 7, 2019
24 °C

ಕನ್ನಡಕ್ಕೆ ಬಂದಿದ್ದಾರೆ ಕೊರಿಯಾ ನಟಿ!

Published:
Updated:
ಕನ್ನಡಕ್ಕೆ ಬಂದಿದ್ದಾರೆ ಕೊರಿಯಾ ನಟಿ!

‘ಚಂದನವನ’ಕ್ಕೆ ಕೊರಿಯಾ ದೇಶದ ನಟಿಯೊಬ್ಬಳ ಪ್ರವೇಶ ಆಗುತ್ತಿದೆ. ಈ ನಟಿಯ ಹೆಸರು ಅಮಿತಾ ಕುಲಾಲ್. ಕನ್ನಡದ ಹೆಸರಿನ ಈ ನಟಿ ಕೊರಿಯಾದವಳು ಆಗಿದ್ದು ಹೇಗೆ ಎಂದು ಯೋಚಿಸುತ್ತಿದ್ದೀರಾ?

ಈ ನಟಿಯ ದುಂಡು ಮುಖ, ಕೆಂಪನೆಯ ಕೆನ್ನೆಗಳನ್ನು ಕಂಡು ಸಂಗೀತ ನಿರ್ದೇಶಕ ಹಂಸಲೇಖ ಅವರು ಪ್ರೀತಿಯಿಂದ ಕರೆದದ್ದು ‘ಈಕೆ ಕೊರಿಯಾದ ನಟಿ’ ಎಂದು. ಅಂದಹಾಗೆ, ಈಕೆ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು ‘ಆ ಎರಡು ವರ್ಷಗಳು’. ಇದರ ಹಾಡುಗಳ ಬಿಡುಗಡೆ ಈಚೆಗೆ ನಡೆಯಿತು. ಈ ಸಿನಿಮಾದ ನಾಯಕ ನಟ ರೇಣುಕ್.

(ಮಧುಸೂದನ್)

ಮಧ್ಯಮ ವರ್ಗದ ಹುಡುಗನೊಬ್ಬ ಪ್ರೀತಿಗೆ ಬಿದ್ದ ನಂತರ ಆತನ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಆಗುವ ಬದಲಾವಣೆಗಳು ಈ ಸಿನಿಮಾದಲ್ಲಿ ಇವೆ.

‘ಸಿನಿಮಾದ ನಾಯಕಿ ವರ್ಷಾಳ ಎರಡು ಮುಖಗಳ ಪರಿಚಯ ಕೂಡ ಇದರಲ್ಲಿ ಇದೆ’ ಎನ್ನುತ್ತಾರೆ ನಿರ್ದೇಶಕ ಮಧುಸೂದನ್.

‘ಇದು ನನ್ನ ಪಾಲಿಗೆ ಸಿನಿಮಾ ಮಾತ್ರವೇ ಅಲ್ಲ. ಇದು ನನ್ನದೊಂದು ಭಾವವೂ ಹೌದು. ಪ್ರಾಮಾಣಿಕವಾಗಿ ಈ ಸಿನಿಮಾ ಮಾಡಿದ್ದೇವೆ’ ಎಂದರು ನಾಯಕ ನಟಿ ಅಮಿತಾ.

ಈ ಸಿನಿಮಾಕ್ಕೆ ಸಂಗೀತ ನೀಡಿದವರು ಅನೂಪ್‌ ಸೀಳಿನ್. ಸಾಹಿತ್ಯ ಅರಸು ಅಂತಾರೆ ಅವರದ್ದು. ಹಿರಿಯ ನಟ ರಾಮಕೃಷ್ಣ ಅವರೂ ಇದರಲ್ಲಿ ಒಂದು ಪಾತ್ರ ನಿಭಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)