ಶುಕ್ರವಾರ, ಡಿಸೆಂಬರ್ 6, 2019
17 °C

‘ಕ್ವೀನ್’ ಹೀರೊ ಹೊಸ ಸುದ್ದಿ

Published:
Updated:
‘ಕ್ವೀನ್’ ಹೀರೊ ಹೊಸ ಸುದ್ದಿ

ಹಿಂದಿ ಸಿನಿಮಾ ’ಕ್ವೀನ್’ನಲ್ಲಿ ನಟಿ ಕಂಗನಾ ರನೋಟ್‌ಗೆ ನಾಯಕನಾಗಿ ನಟಿಸಿದ್ದ ರಾಜ್‌ಕುಮಾರ್ ರಾವ್ ಗೊತ್ತಲ್ಲ. ಅವರೀಗ ಮೂರು ಚಿತ್ರಗಳಲ್ಲಿ ಬ್ಯುಸಿ. ’ಬೆಹೆನ್ ಹೋಗಿ ತೇರಿ’, ’ಟ್ರ್ಯಾಪ್ಡ್’, ’ಬೋಸ್’ ಈ ಮೂರು ಸಿನಿಮಾಗಳಿಗಾಗಿ ರಾಜ್‌ಕುಮಾರ್ ತಮ್ಮ ದೇಹವನ್ನು ಮಾರ್ಪಡಿಸಿಕೊಂಡಿರುವ ಚಿತ್ರಗಳನ್ನು ಕೊಲಾಜ್ ಮಾಡಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

‘ಬೆಹೆನ್...’ಚಿತ್ರದಲ್ಲಿ ಪಕ್ಕಾ ಸಿಕ್ಸ್‌ಪ್ಯಾಕ್ ದೇಹ ಹೊಂದಿರುವ ರಾಜ್‌, ’ಟ್ರ್ಯಾಪ್ಡ್‌’ನಲ್ಲಿ ಸಾಧಾರಣ ಮೈಕಟ್ಟಿನಲ್ಲಿದ್ದಾರೆ, ’ಬೋಸ್‌’ಸಿನಿಮಾದಲ್ಲಿ ಬೊಜ್ಜು ಹೊಟ್ಟೆ ಹೊಂದಿದ್ದಾರೆ.

‘ಬೋಸ್‌’ ಸಿನಿಮಾಕ್ಕಾಗಿ 11ಕೆಜಿ ತೂಕ ಹೆಚ್ಚಿಸಿಕೊಂಡಿರುವ ರಾಜ್‌ಕುಮಾರ್ ಈಗ ಟ್ರೋಲ್, ಮೀಮ್‌ಗಳಿಗೆ ವಸ್ತುವಾಗಿದ್ದಾರೆ. ಹಲವರು ಟ್ವಿಟರ್‌ನಲ್ಲೇ ರಾಜ್ ಅವರ ವಿಭಿನ್ನ ಅವತಾರಗಳಿಗೆ ಮರುಟ್ವೀಟ್ ಮಾಡಿದ್ದಾರೆ. ಆದರೆ, ಮೀಮ್, ಟ್ರೋಲ್‌ಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ರಾಜ್‌ ಎಂದಿನಂತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)