ಸೋಮವಾರ, ಡಿಸೆಂಬರ್ 16, 2019
17 °C

ಜಿಎಸ್‌ಟಿಯ ಅಣಕ: ಚಿದಂಬರಂ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಿಎಸ್‌ಟಿಯ ಅಣಕ: ಚಿದಂಬರಂ ಟೀಕೆ

ನವದೆಹಲಿ: ‘ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಪರಿಪೂರ್ಣ ಸ್ವರೂಪದಲ್ಲಿ ಇಲ್ಲವೇ ಇಲ್ಲ. ಒಂದಕ್ಕಿಂತ ಹೆಚ್ಚು ತೆರಿಗೆಗಳನ್ನು ಜಾರಿಗೆ ತರುವ ಮೂಲಕ ಜಿಎಸ್‌ಟಿಯನ್ನು ಲೇವಡಿ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರು ಕಟುವಾಗಿ ಟೀಕಿಸಿದ್ದಾರೆ.‘ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕನಿಷ್ಠ ಏಳು ಬಗೆಯ ತೆರಿಗೆಗಳು ಇವೆ. ಹೀಗಿರುವಾಗ ಇದನ್ನು ‘ಒಂದು ದೇಶ, ಒಂದು ತೆರಿಗೆ’ ಎಂದು ಕರೆಯುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.‘ಈಗ ಜಾರಿಗೆ ತಂದಿರುವ ತೆರಿಗೆ ದರಗಳನ್ನು ತಗ್ಗಿಸಲು ಮತ್ತು ಶೇ 18ರ ಗರಿಷ್ಠ ಮಿತಿ ವಿಧಿಸಲು ಪಕ್ಷವು ಒತ್ತಾಯಿಸುವುದು. ಪೆಟ್ರೋಲಿಯಂ ಉತ್ಪನ್ನ, ವಿದ್ಯುತ್‌ ಮತ್ತು ರಿಯಲ್‌ ಎಸ್ಟೇಟ್‌ ವಹಿವಾಟನ್ನು ಆದಷ್ಟು ಬೇಗ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎನ್ನುವುದು ಪಕ್ಷದ ನಿಲುವಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)