ಶನಿವಾರ, ಡಿಸೆಂಬರ್ 14, 2019
20 °C

ರೈತನ ಆದಾಯ ಮೂಲವಾದ ಸೆಲ್ಫಿ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತನ ಆದಾಯ ಮೂಲವಾದ ಸೆಲ್ಫಿ ಪ್ರೀತಿ

ಗುಂಡ್ಲುಪೇಟೆ:  ಪ್ರವಾಸಿಗರ ಸೆಲ್ಫಿ ಪ್ರೀತಿ ಇಲ್ಲಿ ರೈತನಿಗೆ ಆದಾಯದ ಮೂಲವಾಗಿದೆ. ಬೆಳೆದ ಸಮೃದ್ಧ ಸೂರ್ಯಕಾಂತಿ ಬೆಳೆಯ ‘ಸೌಂದರ್ಯ’ವನ್ನೇ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ಸೂರ್ಯಕಾಂತಿ ಬಿತ್ತನೆ ಮಾಡಿದ್ದ ತಾಲ್ಲೂಕಿನ ಬೇಗೂರು ಗ್ರಾಮದ ರೈತ ಕುಮಾರ್ ಈಗ ತನ್ನ ಜಮೀನಿನಲ್ಲಿನ ಸೂರ್ಯಕಾಂತಿ ಹೂಗಳ ಸೊಬಗಿನ ಲಾಭ ಪಡೆದು, ಹೆದ್ದಾರಿ ಪ್ರಯಾಣಿಕರರ ಸ್ವಂತಿ ಆಸಕ್ತಿಯನ್ನು ಲಾಭದಾಯಕವಾಗಿಸಿ ಕೊಳ್ಳುತ್ತಿದ್ದಾರೆ.

ಸೂರ್ಯಕಾಂತಿ ಬೆಳೆಯ ನಡುವೆ ನಿಂತು ಮೊಬೈಲ್‌ನಲ್ಲಿ ಸ್ವಂತಿ, ಫೋಟೊ ತೆಗೆದುಕೊಳ್ಳಬಯಸುವ ಪ್ರವಾಸಿಗರಿಗೆ ನಿಗದಿತ ಶುಲ್ಕ ಪಡೆಯುತ್ತಿದ್ದಾರೆ.  ಸೂರ್ಯಕಾಂತಿ ಬೆಳೆ ಕಟಾವಿಗೆ ಮುನ್ನವೇ ಆದಾಯ ತರುತ್ತಿದೆ. ಕುಮಾರ್‌ ಅವರ ಜಮೀನು ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಂತೇ ಇದೆ. ಸಮೃದ್ಧವಾಗಿ ಅರಳಿರುವ ಸೂರ್ಯಕಾಂತಿ ಹೂಗಳ ಗುಚ್ಛ ನೋಡುಗರನ್ನು ಸೆಳೆಯುತ್ತಿದೆ.

ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಫೋಟೋ, ಸ್ವಂತಿ ತೆಗೆದುಕೊಳ್ಳಲು ನಿಲ್ಲುತ್ತಾರೆ. ಸ್ವಂತಿ ಪ್ರೇಮವನ್ನು ಗಮನಿಸಿದ ರೈತ ಇದಕ್ಕಾಗಿ ತಲಾ ₹ 20 ರೂಪಾಯಿ ಶುಲ್ಕ ನಿಗದಿಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬೇಗೂರಿನಿಂದ ಹಿರಿಕಾಟಿ ಗ್ರಾಮದವರಗೆ ಅನೇಕ ರೈತರು ಸೂರ್ಯಕಾಂತಿ ಬೆಳೆದಿದ್ದಾರೆ.  ಜೂನ್ ಮತ್ತು ಜುಲೈನಲ್ಲಿ ಕೇರಳ, ತಮಿಳುನನಾಡಿನಿಂದ ಪ್ರವಾಸಿಗರು ರಾಜ್ಯಕ್ಕೆ ಹೆಚ್ಚಾಗಿ ಬರುತ್ತಾರೆ.

ಮೊದಲು ಸಹಜವಾಗಿ ಜಮೀನುಗಳಿಗೆ ಹೋಗಿ ಚಿತ್ರ ತೆಗೆದುಕೊಳ್ಳುತ್ತಿದ್ದರು. ಹೆಚ್ಚಿನ ಜನರು ಹೀಗೆ ನುಗ್ಗದರೆ ಬೆಳೆ ಹಾನಿ ಭೀತಿಗೆ ಒಳಗಾದ ಅವರು, ಬೆಳೆ ರಕ್ಷಿಸಿಕೊಳ್ಳುವ ಕ್ರಮವಾಗಿಯೂ ದರ ನಿಗದಿಪಡಿಸಿದರು. ಪ್ರತಿದಿನ ಕೆಲವಾಹನಗಳ ಪ್ರಯಾ ಣಿಕರು ನಿಲ್ಲಿಸಿ ಫೋಟೊಗೆ ನಿಲ್ಲುತ್ತಾರೆ. ಎಷ್ಟೆ ಜನರಿರಲಿ, ಶುಲ್ಕ ತಲಾ ₹ 20. ರೈತ ಕುಮಾರ್‌ ಅವರ ಈ ಆದಾಯದ ಮೂಲದ ಚಿಂತನೆಯನ್ನು ಇತರೆ ರೈತರು ಅನುಸರಿಸಲು ಒಲವು ತೋರಿದ್ದಾರೆ. ಸ್ವಂತಿ ತೆಗೆದುಕೊಳ್ಳುವುದು ಅವರಿಗೆ ಖುಷಿ ನೀಡಿದರೆ; ನಮಗೆ ಆದಾಯ ತಂದು ನಮ್ಮ ಖುಷಿಯನ್ನು ಹೆಚ್ಚಿಸುತ್ತಿದೆ ಎಂದು  ಕುಮಾರ್ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)