ಭಾನುವಾರ, ಡಿಸೆಂಬರ್ 8, 2019
21 °C

ಅಹಮದಾಬಾದ್‌ ಭಾರತದ ವಿಶ್ವ ಪಾರಂಪಾರಿಕ ನಗರ: ಯುನೆಸ್ಕೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌ ಭಾರತದ ವಿಶ್ವ ಪಾರಂಪಾರಿಕ ನಗರ: ಯುನೆಸ್ಕೊ

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೊ) ಪಾರಂಪಾರಿಕ ತಾಣಗಳ ಪಟ್ಟಿಗೆ ಹಲವು ಸ್ಥಳಗಳ ಸೇರ್ಪಡೆ ಮಾಡಿದ್ದು, ಭಾರತದ ಗುಜರಾತ್‌ನ ಅಹಮದಾಬಾದ್‌ ಸ್ಥಾನ ಪಡೆದಿದೆ.

ಐತಿಹಾಸಿಕ ನಗರಿ ಅಹಮದಾಬಾದ್‌ ಭಾರತದ ಮೊದಲ ವಿಶ್ವ ಪಾರಂಪಾರಿಕ ನಗರ ಪಟ್ಟಿಗೆ ಸೇರ್ಪಡೆಗೊಂಡಿದೆ.

ಯುನೆಸ್ಕೋದ ಪಾರಂಪಾರಿಕ ತಾಣಗಳ ಸಮಿತಿ ಶನಿವಾರ ಕಾಂಬೋಡಿಯಾ, ಚೀನಾ ಮತ್ತು ಭಾರತದಲ್ಲಿನ ತಾಣಗಳನ್ನು ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಗೆ ಸೇರಿಸಿತು.

ಅಹಮದಾಬಾದ್ ಐತಿಹಾಸಿಕ ನಗರ

15ನೇ ಶತಮಾನದಲ್ಲಿ ಸುಲ್ತಾನ್‌ ಅಹ್ಮದ್‌ ಷಾ ಸ್ಥಾಪಿಸಿದ ಅಹಮದಾಬಾದ್‌ ನಗರದ ಸಬರಮತಿ ನದಿಯ ಪೂರ್ವ ದಂಡೆಯ ಮೇಲಿದೆ. ಸುಲ್ತಾನರ ಆಡಳಿತಾವಧಿಯಲ್ಲಿ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಒಳಗೊಂಡಿದೆ. ಅದರಲ್ಲೂ ವಿಶೇಷವಾಗಿ ಭದ್ರ ಕೋಟೆ, ಗೋಡೆಗಳು ಮತ್ತು ಕೋಟೆ ದ್ವಾರಗಳು ಹಾಗೂ ಹಲವು ಮಸೀದಿ, ಸಮಾಧಿಗಳಿವೆ. ನಂತದ ಅವಧಿಯಲ್ಲಿ ಪ್ರಮುಖ ಹಿಂದೂ ಮತ್ತು ಜೈನ ದೇವಾಲಯಗಳು ನಿರ್ಮಿಸಲ್ಪಟ್ಟಿವೆ.

ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಮನೆಗಳು, ಸಾಂಪ್ರದಾಯಿಕ ಸೊಗಡಿನಿಂದ ಕೂಡಿದ ಬೀದಿಗಳು ಹಾಗೂ ಪಕ್ಷಿಗಳು, ಸಾರ್ವಜನಿಕ ಬಾವಿಗಳು, ಧಾರ್ಮಿಕ ಸಂಸ್ಥೆಗಳಂತಹ

ಸೇರ್ಪಡೆಗೊಂಡ ಇತರ ತಾಣಗಳು

ಕಾಂಬೋಡಿಯಾದ ಪ್ರಾಚೀನ ಐಷನ್‌ಪುರದ ಪುರಾತತ್ವ ಸ್ಥಳ ಸ್ಯಾಂಬೋರ್‌ ಪ್ರಿ ಕುಕ್‌ ದೇಗುಲ ಪ್ರದೇಶ.

* ಚೀನಾದ ಐತಿಹಾಸಿಕ ಅಂತರರಾಷ್ಟ್ರೀಯ ವಸಾಹತು ಕುಲಾಂಗ್ಸು ಕ್ಸಿಯಾನ್.

ಪ್ರತಿಕ್ರಿಯಿಸಿ (+)