ಶುಕ್ರವಾರ, ಡಿಸೆಂಬರ್ 13, 2019
16 °C

ಪ್ರಭಾವಿ ಯುವ ಭಾರತೀಯರ ಪಟ್ಟಿಯಲ್ಲಿ ಪ್ರಭಾಸ್‌, ರಣವೀರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಭಾವಿ ಯುವ ಭಾರತೀಯರ ಪಟ್ಟಿಯಲ್ಲಿ ಪ್ರಭಾಸ್‌, ರಣವೀರ್‌

'ಬಾಹುಬಲಿ' ಸಿನಿಮಾ ಹಿಟ್‌ ಆದ ಬೆನ್ನಲ್ಲೇ ನಟ ಪ್ರಭಾಸ್‌ ಯೂತ್‌ ಐಕಾನ್‌ ಆಗಿ ಗುರುತಿಸಿಕೊಂಡಿದ್ದರು. ಈಗ ’50 ಪ್ರಭಾವಿ ಯುವ ಭಾರತೀಯರು’ ಪಟ್ಟಿಯಲ್ಲಿ ಪ್ರಭಾಸ್‌ ಸ್ಥಾನ ಪಡೆದಿದ್ದಾರೆ.

ಬಾಲಿವುಡ್‌ ನಟ ರಣವೀರ್‌ ಸಿಂಗ್‌, ಪ್ರಭಾಸ್‌ ಜಿಕ್ಯೂ ಇಂಡಿಯಾ ಮ್ಯಾಗಜೀನ್‌ ಬಿಡುಗಡೆಗೊಳಿಸಿರುವ 2017ರ 50 ಪ್ರಭಾವಿ ಯುವ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು, ಪೇಟಿಎಂ ಆ್ಯಪ್‌ ಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ, ಆಕಾಶ್‌ ಅಂಬಾನಿ, ಅಲಂಕೃತ ಶ್ರೀವಾತ್ಸವ, ಅಮೃತಾ ಪಾಂಡೆ, ನಿತೇಶ್‌ ಕೃಪಲಾನಿ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರರು. 

40 ವರ್ಷದೊಳಗಿನ ಜನರ ಸಾಧನೆಯನ್ನು ಪರಿಗಣಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ವ್ಯಾಪಾರ, ಉದ್ಯಮ, ರಾಜಕೀಯ, ಫ್ಯಾಶನ್‌, ಡಿಸೈನ್‌, ಮಾಧ್ಯಮ, ಆಹಾರೋದ್ಯಮ, ಮನರಂಜನೆ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.

ಪ್ರತಿಕ್ರಿಯಿಸಿ (+)