ಭಾನುವಾರ, ಡಿಸೆಂಬರ್ 8, 2019
21 °C

ಹೊಟೇಲ್‌, ರೆಸ್ಟೊರೆಂಟ್‌ಗಳಲ್ಲಿ ‘ಸೇವಾ ಶುಲ್ಕ’ ಕಡ್ಡಾಯವಲ್ಲ; ಪಾವತಿಸಲು ಒತ್ತಾಯಿಸಿದರೆ ದೂರು ನೀಡಿ: ಕೇಂದ್ರ ಸರ್ಕಾರ

Published:
Updated:
ಹೊಟೇಲ್‌, ರೆಸ್ಟೊರೆಂಟ್‌ಗಳಲ್ಲಿ ‘ಸೇವಾ ಶುಲ್ಕ’ ಕಡ್ಡಾಯವಲ್ಲ; ಪಾವತಿಸಲು ಒತ್ತಾಯಿಸಿದರೆ ದೂರು ನೀಡಿ: ಕೇಂದ್ರ ಸರ್ಕಾರ

ಬೆಂಗಳೂರು: ಹೊಟೇಲ್‌ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಗ್ರಾಹಕರು ಪಡೆಯುವ ತಿಂಡಿ–ತಿನಿಸುಗಳ ಮೇಲೆ ಸೇವಾ ಶುಲ್ಕ ವಿಧಿಸುವುದು ಕಾನೂನು ಬಾಹಿರ, ಅಂಥ ಹೊಟೇಲ್‌ಗಳ ವಿರುದ್ಧ ಗ್ರಾಹಕರು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಬಹುದು ಎಂದು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಗ್ರಾಹಕರು ಪಡೆಯುವ ಆಹಾರದ ಮೇಲೆ ಹೊಟೇಲ್‌ ಮತ್ತು  ರೆಸ್ಟೊರೆಂಟ್‌ಗಳು ಸೇವಾ ಶುಲ್ಕ ವಿಧಿಸುವುದನ್ನು ನಿಷೇಧಿಸಿ ಗ್ರಾಹಕರ ವ್ಯವಹಾರಗಳ ಇಲಾಖೆ ಏಪ್ರಿಲ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು. ಗ್ರಾಹಕರಿಗೆ ಇಚ್ಛೆ ಇದ್ದಲ್ಲಿ ಸೇವಾ ಶುಲ್ಕ ನೀಡಬಹುದು ಎಂದು ತಿಳಿಸಲಾಗಿತ್ತು.

‘ಈ ಕುರಿತು ಈಗಾಗಲೇ ಸೂಚನೆ ಹೊರಡಿಸಲಾಗಿದ್ದು, ಬಲವಂತವಾಗಿ ಸೇವಾ ಶುಲ್ಕ ವಿಧಿಸುವುದು ಕಂಡು ಬಂದಲ್ಲಿ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು’ ಎಂದು ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅವಿನಾಶ್‌ ಕೆ ಶ್ರೀವಾಸ್ತವ ತಿಳಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಸೂಚನೆ ರವಾನಿಸಿದೆ. ಹೊಟೇಲ್‌ ಹಾಗೂ ರೆಸ್ಟೊರೆಂಟ್‌ಗಳಲ್ಲಿ ‘ಸೇವಾ ಶುಲ್ಕ ವಿಧಿಸುವುದಿಲ್ಲ’ ಎಂಬ ಫಲಕ ಹಾಕುವುದನ್ನು ಕಡ್ಡಾಯಗೊಳಿಸಿ ಈ ಹಿಂದೆಯೇ ರಾಜ್ಯ ಸರ್ಕಾರವೂ ಆದೇಶಿಸಿದೆ.

ಪ್ರತಿಕ್ರಿಯಿಸಿ (+)