ಶನಿವಾರ, ಡಿಸೆಂಬರ್ 14, 2019
21 °C

ಜೂನ್‌ನಲ್ಲಿ ಬಳಸಿದ ಸೇವೆಗೂ ಜಿಎಸ್‌ಟಿ ಅನ್ವಯಿಸಲಿದೆ

ಪಿಟಿಐ Updated:

ಅಕ್ಷರ ಗಾತ್ರ : | |

ಜೂನ್‌ನಲ್ಲಿ ಬಳಸಿದ ಸೇವೆಗೂ ಜಿಎಸ್‌ಟಿ ಅನ್ವಯಿಸಲಿದೆ

ನವದೆಹಲಿ: ಬಳಕೆದಾರರು ಜೂನ್‌ ತಿಂಗಳಲ್ಲಿ ಬಳಸಿದ ಸೇವೆಗಳಿಗೂ ಜಿಎಸ್‌ಟಿ ಪಾವತಿಸಬೇಕಾಗಿದೆ.

ದೂರವಾಣಿ, ಕ್ರೆಡಿಟ್‌ ಕಾರ್ಡ್‌ ಸೇರಿದಂತೆ ಇತರ ಯಾವುದೇ ಬಗೆಯ ಸೇವೆಗಳನ್ನು ಜೂನ್‌ ತಿಂಗಳಲ್ಲಿ ಬಳಸಿಕೊಂಡಿದ್ದರೆ ಅದಕ್ಕೆ ಜುಲೈನಲ್ಲಿ ಹಣ ಪಾವತಿಸುವಾಗ ಜಿಎಸ್‌ಟಿ ಭರಿಸಬೇಕಾಗುತ್ತದೆ.

ಜಾಹೀರಾತು ನೀಡಲು ಸೂಚನೆ: ಜಿಎಸ್‌ಟಿ ಜಾರಿ ನಂತರ ವ್ಯಾಪಕ ಬಳಕೆಯ ಉತ್ಪನ್ನಗಳ ಗರಿಷ್ಠ ಮಾರಾಟ ಬೆಲೆಯಲ್ಲಿನ ಹೆಚ್ಚಳದ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ಕೇಂದ್ರ ಸರ್ಕಾರ ವರ್ತಕರು ಮತ್ತು ಉದ್ದಿಮೆ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಜಿಎಸ್‌ಟಿ ಮುಂಚಿನ ದಾಸ್ತಾನು ಮಾರಾಟ ಮಾಡುವಾಗ ಹಳೆಯ ಮತ್ತು ಹೊಸ ದರವನ್ನು ಕಡ್ಡಾಯವಾಗಿ ಮೂರು ತಿಂಗಳ ಕಾಲ  ಉತ್ಪನ್ನದ ಮೇಲೆ ಪ್ರದರ್ಶಿಸಬೇಕು ಎಂದೂ ಸರ್ಕಾರ ತಾಕೀತು ಮಾಡಿದೆ.

ಜೈಲು ಶಿಕ್ಷೆ; ಎಚ್ಚರಿಕೆ: ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸರಕುಗಳ ಮೇಲೆ ಹೊಸ ಜಿಎಸ್‌ಟಿ ದರ ಮುದ್ರಿಸದಿದ್ದರೆ  ₹ 1 ಲಕ್ಷದವರೆಗೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾದೀತು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ‘ಗ್ರಾಹಕರ ದೂರುಗಳಿಗೆ ಸ್ಪಂದಿಸಲು  ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ಗ್ರಾಹಕರ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ. ಹೊಸ ಎಂಆರ್‌ಪಿ ಅಡಿ, ಹಳೆಯ ದಾಸ್ತಾನನ್ನು ಮೂರು ತಿಂಗಳಲ್ಲಿ ಮಾರಾಟ ಮಾಡಲು ಸರ್ಕಾರ ವರ್ತಕರಿಗೆ ಅನುಮತಿ ನೀಡಿದೆ.

**

‌ಬೆಲೆ ಇಳಿಸಿದ ಕಾಲ್ಗೇಟ್‌ ಪಾಮೊಲಿವ್‌

ಜಿಎಸ್‌ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಾಲ್ಗೇಟ್‌ ಪಾಮೊಲಿವ್‌ ಇಂಡಿಯಾ ಕಂಪೆನಿಯು ಟೂತ್‌ ಬ್ರಷ್‌, ಟೂತ್‌ ಪೇಸ್ಟ್‌ ಬೆಲೆಯನ್ನು ಶೇ 9 ರಷ್ಟು ಇಳಿಕೆ ಮಾಡಿದೆ.

ಪರಿಷ್ಕೃತ ದರವು ಜುಲೈ 1 ರಿಂದಲೇ ಅನ್ವಯಿಸಲಿದೆ ಎಂದು ಕಂಪೆನಿ ತಿಳಿಸಿದೆ.

ಕೇಂದ್ರ ಸರ್ಕಾರ ಸ್ನಾನಕ್ಕೆ ಬಳಸುವ ಸೋಪು, ಕೇಶ ತೈಲ, ಡಿಟರ್ಜಂಟ ಪೌಡರ್‌ಗಳನ್ನು ಶೇ 18ರಷ್ಟು ತೆರಿಗೆ ದರದ ವ್ಯಾಪ್ತಿಗೆ ತಂದಿದೆ. ಇದರಿಂದ ಇವುಗಳ ಬೆಲೆ ಇಳಿಕೆ ಆಗಿದೆ.

ಎಫ್‌ಎಂಸಿಜಿ ಕಂಪೆನಿಗಳು ಸರಕುಗಳ ಬೆಲೆ ಇಳಿಕೆ ಮಾಡುವ ಮೂಲಕ ಅಥವಾ ಬೆಲೆಯನ್ನು ಯಥಾಸ್ಥಿತಿಯಲ್ಲಿ ಇಟ್ಟು ತೂಕ ಹೆಚ್ಚು ಮಾಡುವ ಮೂಲಕ ಜಿಎಸ್‌ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿವೆ.

ಪ್ರತಿಕ್ರಿಯಿಸಿ (+)